ಮುಂಡಗೋಡ: ಬೈಕ್ ನಿಂದ ಬಿದ್ದು ಮಹಿಳೆ ಮೃತ್ಯು

Update: 2018-07-31 11:57 GMT

ಮುಂಡಗೋಡ,ಜು.31: ತಾಲೂಕಿನ ಗುಂಜಾವತಿ ಬಳಿ ಸೋಮವಾರ ಸಂಜೆ ಮಹಿಳೆಯೊಬ್ಬರು ಬೈಕ್ ನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ತಾಲೂಕಿನ ಗುಂಜಾವತಿ ಗ್ರಾಮದ ಬಾಗುಬಾಯಿ ಜನ್ನು ಜೋರೆ ಮೃತಪಟ್ಟ ಮಹಿಳೆ ಎಂದು ತಿಳಿದುಬಂದಿದೆ. ಇವರು ಸೋಮವಾರ ಪಟ್ಟಣದ ಸಂತೆ ಮುಗಿಸಿ ಸಂಜೆ ಬೈಕ್ ನಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿರುವ ಸಂದರ್ಭ ಗುಂಜಾವತಿ ಸಮೀಪದ ಸ್ಮಶಾನದ ಹತ್ತಿರ ಬೈಕ್ ನಿಂದ ಬಿದ್ದಿದ್ದು, ಪರಿಣಾಮ ತಲೆಗೆ ತೀವ್ರ  ಗಾಯಗಳಾಗಿತ್ತು. ತಕ್ಷಣವೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದಾರೆ ಎಂದು ತಿಳಿದು ಬಂದಿದೆ. ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News