ಎನ್ ಆರ್ ಸಿಯಲ್ಲಿ ಹೆಸರಿಲ್ಲದವರೂ ಮತ ಚಲಾಯಿಸಬಹುದು: ಮುಖ್ಯ ಚುನಾವಣಾ ಆಯುಕ್ತ ರಾವತ್

Update: 2018-08-01 06:53 GMT

ಹೊಸದಿಲ್ಲಿ, ಆ.1: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಕರಡು ಪಟ್ಟಿಯಲ್ಲಿ ಕೈಬಿಡಲಾಗಿರುವ ಅಸ್ಸಾಂ ರಾಜ್ಯದ 40 ಲಕ್ಷ ಮಂದಿ ಸದ್ಯ ಚಿಂತೆಗೀಡಾಗುವ ಅಗತ್ಯವಿಲ್ಲ. ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿದ್ದರೆ ಹಾಗೂ ಅವರು ಇತರ ಷರತ್ತುಗಳನ್ನು ಪೂರೈಸಿದ್ದರೆ ಅವರು ಮತ ಚಲಾಯಿಸಬಹುದಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಹೇಳಿದ್ದಾರೆ.

ಚುನಾವಣಾ ಆಯೋಗ ಜನವರಿಯಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸಲಿದ್ದು, ಅಂತಿಮ ಎನ್‍ಆರ್‍ಸಿಗೆ ಕಾಯುವುದಿಲ್ಲವೆಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ಏನೂ ಬದಲಾವಣೆಯಾಗದು ಎಂದು ಹೇಳಿದ ಅವರು, ರಿಜಿಸ್ಟರ್ ನಿಂದ ಕೈಬಿಡಲಾಗಿರುವ 40 ಲಕ್ಷ ಮಂದಿ  ಮತ ಚಲಾಯಿಸಬಹುದೇ ಎಂಬ ಪ್ರಶ್ನೆ ಅವಧಿ ಪೂರ್ವ ಎಂದು ಹೇಳಿದ್ದಾರೆ. ಪಟ್ಟಿಯಲ್ಲಿ ಕೈಬಿಡಲಾಗಿರುವ ಹಲವಾರು ಮಂದಿ 18 ವರ್ಷಕ್ಕಿಂತ ಕೆಳಗಿನವರಾಗಿರಬಹುದು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಪ್ರಕಟಗೊಂಡಿರುವ ಕರಡು ರಿಜಿಸ್ಟರ್ ರಾಜಕೀಯ ವಲಯದಲ್ಲೂ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News