40 ಲಕ್ಷ ಜನರಿಗೆ ನಾಗರಿಕತೆ ನಿರಾಕರಣೆ ಫ್ಯಾಶಿಸಂ ಕ್ರಮ- ಸಂಸದ ಕುಂಞಲಿಕುಟ್ಟಿ ಟೀಕೆ

Update: 2018-08-02 07:12 GMT

 ಕಾಸರಗೋಡು,ಆ.2: ಕೇರಳದ ಸಂಸದ ಪಿಕೆ ಕುಂಞÁಲಿಕುಟ್ಟಿ ಅಸ್ಸಾಂನಲ್ಲಿ 40ಲಕ್ಷ ಮಂದಿಗೆ ನಾಗರಿಕತೆಯನ್ನು ನಿಷೇಧಿಸಿದ ಕ್ರಮವನ್ನು ಫ್ಯಾಶಿಸಂ ಎಂದು ಕರೆದಿದ್ದಾರೆ. ಅವರು ಕಾಸರಗೋಡಿನ ಟೌನ್ ಹಾಲ್‍ನಲ್ಲಿ  ಮುಸ್ಲಿಂ ಲೀಗ್ ರಾಜ್ಯಸಮಿತಿಯ ವತಿಯಿಂದ ಆಯೋಜಿಸಲಾಗಿದ್ದಾ ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಳ್ ಅನುಸ್ಮರಣೆ ಸಮ್ಮೇಳನದಲ್ಲಿ ಮಾತಾಡುತ್ತಿದ್ದರು.

 ಈಗ ನಾಗರಿಕತೆ ನಿಷೇಧಿಸಲಾದವರೆಲ್ಲರೂ ಹುಟ್ಟಿದ್ದು ಭಾರತದಲ್ಲಿಯೇ ಆಗಿದೆ.  ಮಾಜಿ ರಾಷ್ಟ್ರಪತಿ,ಸೈನಿಕರ ಕುಟುಂಬಗಳಿಗೂ ನಾಗರಿಕತೆ ನಿಷೇಧಿಸಲಾಗಿದೆ. ದೇಶದಿಂದ ಇವರನ್ನೆಲ್ಲ ಹೊರಗೆ ಹಾಕಿದರೆ ಆಗುವ ರಾಜಕೀಯ ಲಾಭವನ್ನು ನೋಡಿ ಹೀಗೆ ಮಾಡಲಾಗಿದೆ ಎಂದು ಸಂಸದ  ಕುಂಞÁಲಿಕುಟ್ಟಿ ಆರೋಪಿಸಿದರು.

ಈ ಕುರಿತು  ಪ್ರತಿಕ್ರಿಯೆ ನೀಡಬೇಕಾದವರೆಲ್ಲ ಮೌನವಾಗಿದ್ದಾರೆ. ಇದರಿಂದ ತಮಗೆ ನಷ್ಟವಿದೆ ಎನ್ನುವ ಲೆಕ್ಕಾಚಾರ ಅವರದು. ಆದರೆ  ಪ್ರಜಾಪ್ರಭುತ್ವವಿರುವ ದೇಶದಲ್ಲಿ ಇದು ಸರಿಯಾದ ಕ್ರಮವಲ್ಲ. ದೇಶದ ಪಾರ್ಲಿಮೆಂಟಿನಲ್ಲಿ ಈಗ ಕೋಮುವಾದಿ ಭಾಷಣಕ್ಕೂಕೆಲವರು ಹಿಂಜರಿಯುವುದಿಲ್ಲ ಎಂದು ಕುಂಞÁಲಿಕುಟ್ಟಿ ಹೇಳಿದರು.

https://www.madhyamam.com/kerala/pk-kunhalikutty-react-assam-nrc-kerala-news/2018/aug/01/532683

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News