ಮುಂಡಗೋಡ: ಸಾತೋಡಿ ಫಾಲ್ಸ್ ನಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Update: 2018-08-03 11:55 GMT

ಮುಂಡಗೋಡ,ಆ.03: ಬುಧವಾರ ಯಲ್ಲಾಪುರದ ಸಾತೋಡಿ ಫಾಲ್ಸ್ ನೋಡಲು ಗೆಳೆಯರೊಂದಿಗೆ ತೆರಳಿದ್ದ ವೇಳೆ ಪದವಿ ಕಾಲೇಜಿನ ವಿದ್ಯಾರ್ಥಿ ಯುಸೂಫ್(19) ನೀರುಪಾಲಾಗಿದ್ದು, ಶುಕ್ರವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಬುಧವಾರ ಮುಂಡಗೋಡ ತಾಲೂಕಿನಿಂದ 14 ಜನ ಸ್ನೇಹಿತರು ಸಾತೋಡಿ ಪ್ರವಾಸಕ್ಕೆ ತೆರಳಿದ್ದರು. ಫಾಲ್ಸ್ ವೀಕ್ಷಣೆ ಸಂದರ್ಭದಲ್ಲಿ ಯೂಸೂಫ್ ಕಾಲುಜಾರಿ ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ. ನಂತರ ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಹಾಗೂ ಸ್ಥಳೀಯ ಮುಳುಗು ತಜ್ಞರು, ಮೀನುಗಾರರ ಸತತ ಹುಡುಕಾಟದಿಂದ ಇಂದು ಜಲಪಾತದ ಕಲ್ಲು ಬಂಡೆಗಳ ನಡುವೆ ಆತನ ಶವ ಪತ್ತೆಯಾಗಿದೆ. ಈ  ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News