ದಮ್ಮಾಮ್‍ನಿಂದ ಕಲ್ಲಿಕೋಟೆ, ಕೊಚ್ಚಿ ಜೆಟ್ ಏರ್‍ವೇಸ್ ಸೇವೆ ಸ್ಥಗಿತ

Update: 2018-08-03 12:00 GMT

 ದಮ್ಮಾಮ್,ಆ.3: ಜೆಟ್ ಏರ್‍ವೇಸ್ ವಿಮಾನವು ದಮ್ಮಾಮ್‍ನಿಂದ  ಕಲ್ಲಿಕೋಟೆ, ಕೊಚ್ಚಿಗೆ ತನ್ನ  ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.  ದಮ್ಮಾಮ್‍ನಿಂದ ನೇರವಾಗಿ ಕೊಚ್ಚಿಗೆ ಹಾರಾಟ ನಡೆಸುತ್ತಿದ್ದ ವಿಮಾನಗಳ ಸೇವೆ ಸ್ಥಗಿತಗೊಂಡಿದ್ದು  ಪ್ರಯಾಣಿಕರಿಗೆ ತೀವ್ರ ಸಂಕಷ್ಟವನ್ನು ಉಂಟುಮಾಡಿದೆ. ಕಣ್ಣೂರ್ ವಿಮಾನ ನಿಲ್ದಾಣಕ್ಕೆ ಹಾರಾಟ ಬದಲಾಯಿಸುವುದಕ್ಕೆ ಮುಂಚಿತವಾಗಿ ಜೆಟ್ ಏರ್ ವೇಸ್ ಈ ಕ್ರಮಕ್ಕೆ ಮುಮದಾಗಿದೆ ಎಂದು ಆಕ್ಷೇಪ ಕೇಳಿ ಬಂದಿದೆ.

 ಸೌದಿಅರೇಬಿಯದಿಂದ ಕೇರಳದ ಮೂರು ವಿಮಾನ ನಿಲ್ದಾಣಗಳಿಗೆ ನೇರ ವಿಮಾನ ಹಾರಾಟ ನಡೆಸುವ ಪ್ರಧಾನ ಸೆಕ್ಟರ್ ದಮ್ಮಾಮ್ ಆಗಿದ್ದು, ಏರ್ ಇಂಡಿಯ, ಜೆಟ್ ಏರ್‍ವೇಸ್ ಇಲ್ಲಿಂದ ಹಾರಾಟ ನಡೆಸುತ್ತಿವೆ. ಇವುಗಳಲ್ಲಿ ಜೆಟ್ ಏರ್‍ವೇಸ್ ಸೆಪ್ಟಂಬರ್ 22ರಿಂದ ಅಕ್ಟೋಬರ್ 27ರವರೆಗೆ ತಾತ್ಕಾಲಿಕವಾಗಿ ಹಾರಾಟ  ಸ್ಥಗಿತಗೊಳಿಸುತ್ತಿದೆ ಎಂದು ತಿಳಿದುಬಂದಿದೆ.

 ಆದ್ದರಿಂದ ಇನ್ನು  ದಮ್ಮಾಮ್‍ನಿಂದ ಕೊಚ್ಚಿಗೆ ನೇರ ವಿಮಾನ ಸೇವೆ ಸ್ಥಗಿತಗೊಂಡಂತಾಗಿದೆ. ಆದರೆ ಕಲ್ಲಿಕೋಟೆಗೆ ಏರ್ ಇಂಡಿಯ ಎಕ್ಸ್‍ಪ್ರೆಸ್ ಮಾತ್ರ ನೇರ ಹಾರಾಟ ನಡೆಸಲಿದೆ. ಪ್ರಯಾಣಿಕರ ಸಂಖ್ಯೆ ಇಳಿಮುಖಗೊಂಡಿದ್ದು ವಿಮಾನ ಹಾರಾಟ ರದ್ದುಪಡಿಸಲು  ಕಾರಣವೆಂದು ಜೆಟ್ ಏರ್‍ವೇಸ್ ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News