ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2018-08-03 17:41 GMT

ವಿದ್ಯಾರ್ಥಿ ವೇತನ: ಐಎನ್‌ಎಸ್‌ಇಡಿ(ಇನ್‌ಸೀಡ್) ದೀಪಕ್ ಮತ್ತು ಸುನೀತಾ ಗುಪ್ತ ದತ್ತಿ ಸ್ಕಾಲರ್‌ಷಿಪ್ಸ್ 2018-19

ವಿವರ: ಆರ್ಥಿಕ ಸಮಸ್ಯೆಯ ಕಾರಣ ಎಂಬಿಎ ಅಧ್ಯಯನ ಮುಂದುವರಿಸಿಕೊಂಡು ಹೋಗಲು ಅಸಾಧ್ಯವಾಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆ: ಇನ್‌ಸೀಡ್ ಎಂಬಿಎಗೆ ನೋಂದಣಿ ಮಾಡಿಕೊಂಡಿರಬೇಕು. ಪುರಸ್ಕಾರ: ಆಯ್ಕೆಯಾದ ಅಭ್ಯರ್ಥಿಗಳಿಗೆ 25,000 ಯುರೋ ಮೊತ್ತದವರೆಗೆ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 13, 2018.

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/ID&1

****************************

ವಿದ್ಯಾರ್ಥಿ ವೇತನ: ಎಂ ಸ್ಕಾಲರ್‌ಷಿಪ್ 2018

ವಿವರ: 12ನೇ ತರಗತಿ ಪಾಸಾಗಿರುವ , ಪದವಿಗೆ ಸೇರ್ಪಡೆಗೊಳ್ಳಬಯಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ: ಕಲಾ ವಿಭಾಗದಲ್ಲಿ ಕನಿಷ್ಠ ಶೇ.80ರಷ್ಟು, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಕನಿಷ್ಟ ಶೇ.85ರಷ್ಟು ಅಂಕ ಗಳಿಸಿದ, 20 ವರ್ಷ ಮೀರಿರದ ಹಾಗೂ 10,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಇರುವವರು ಅರ್ಜಿ ಸಲ್ಲಿಸಬಹುದು.

ಪುರಸ್ಕಾರ: ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 20,000 ರೂ.ದಿಂದ 50,000 ಸಾವಿರ ರೂ. ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 15, 2018.

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/M217

**********************************

ವಿದ್ಯಾರ್ಥಿ ವೇತನ: ಮೆರ್ಕ್ 350 ಸಂಶೋಧನಾ ಅನುದಾನ 2018.

ವಿವರ: ಭವಿಷ್ಯದ ದಿನಗಳಿಗೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರೋತ್ಸಾಹ ನೀಡುವ ಉದ್ದೇಶದ ಈ ಸ್ಕಾಲರ್‌ಷಿಪ್‌ಗೆ ವಿಶ್ವದಾದ್ಯಂತದ ಪಿಎಚ್‌ಡಿ ಪದವೀಧರರು ಅರ್ಜಿ ಸಲ್ಲಿಸಬಹುದು.

ಅರ್ಹತೆ: ಸಂಶೋಧಕರು ಮಾತ್ರ ಅರ್ಜಿ ಸಲ್ಲಿಸಬಹುದು.

ಪುರಸ್ಕಾರ: ಮೂರು ವರ್ಷಾವಧಿಗೆ, ವಾರ್ಷಿಕ 3,50,000 ಯುರೊ ವರೆಗೆ ಅನುದಾನ ನೀಡಲಾಗುವುದು. ಅಲ್ಲದೆ ಡೀಪ್‌ಡ್ರೈವ್ ಕಾರ್ಯಗಾರ, ಪ್ರಯಾಣ ಮತ್ತು ವಸತಿ ಸೌಕರ್ಯ ಹಾಗೂ ಮೆರ್ಕ್‌ನೊಂದಿಗೆ ಸಹಭಾಗಿತ್ವದ ಅವಕಾಶವಿದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 15, 2018.

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/MRG1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News