ಸಾರಿಗೆ ಮುಷ್ಕರ: ಕರ್ನಾಟಕದಲ್ಲಿ ನೀರಸ , ಕೇರಳದಲ್ಲಿ ರಸ್ತೆಗಿಳಿಯದ ವಾಹನಗಳು

Update: 2018-08-07 06:06 GMT

 ಹೊಸದಿಲ್ಲಿ, ಆ.7: ಮೋಟಾರು ವಾಹನ ವಿಧೇಯಕ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿರುವ ರಾಷ್ಟ್ರ ವ್ಯಾಪಿ ಸಾರಿಗೆ ಮುಷ್ಕರಕ್ಕೆ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇರಳದಲ್ಲಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಕರ್ನಾಟಕದಲ್ಲಿ ಕೆಲವು ಆಟೋ ರಿಕ್ಷಾ ಮತ್ತು ಕ್ಯಾಬ್ ಡ್ರೈವರ್ ಯೂನಿಯನ್ ಗಳು ಮುಷ್ಕರಕ್ಕೆ  ಬಂಬಲ ವ್ಯಕ್ತಪಡಿಸಿದೆ.  ಬಿಎಂಟಿಸಿ, ಕೆಎಸ್ ಆರ್ ಟಿಸಿ, ನಮ್ಮ ಮೆಟ್ರೊ  ಎಂದಿನಂತೆ ಓಡಾಟ ನಡೆಸುತ್ತಿದೆ.  ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದೆ.

ಕೇರಳದಲ್ಲಿ  ಬೆಂಬಲ: ಕೇರಳದಲ್ಲಿ ಆಟೋ ರಿಕ್ಷಾ, ಶಾಲಾ ವಾಹನ, ಸರಕು ಸಾಗಾಟ ವಾಹನಗಳು, ಖಾಸಗಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗಳಿದಿಲ್ಲ.

ಆಟೊಮೊಬೈಲ್ ಶೋ ರೂಂ , ಆಟೊಮೊಬೈಲ್ ಬಿಡಿ ಭಾಗಗಳ  ಅಂಗಡಿಗಳು , ಡ್ರೈವಿಂಗ್ ಸ್ಕೂಲ್ ಮಾಲೀಕರು, ಸಿಬಂದಿಗಳು  ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.

ವಿವಿಗಳ ಪರೀಕ್ಷೆ ಮುಂದೂಡಿಕೆ:  ಮಂಗಳವಾರ ನಿಗದಿಯಾಗಿದ್ದ ಕೇರಳದ ಮಹಾತ್ಮಾ ಗಾಂಧಿ, ಕಣ್ಣೂರು, ಕಲ್ಲಿಕೋಟೆ ವಿವಿ ಮತ್ತು ಆರೋಗ್ಯ ವಿಜ್ಞಾನ ವಿವಿ  ಪರೀಕ್ಷೆಗಳನ್ನು ಮುಂದೂಡಲಾಗಿದೆ.

ತಮಿಳುನಾಡಿನಲ್ಲಿ ಖಾಸಗಿ ಬಸ್, ಆಟೋ ರಿಕ್ಷಾ , ಟಾಕ್ಷಿಗಳು ರಸ್ತೆಗಿಳಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News