ಸುಪ್ರೀಂ ಕೋರ್ಟ್ ನ ಮೂವರು ನ್ಯಾಯಮೂರ್ತಿಗಳ ಪ್ರಮಾಣ

Update: 2018-08-07 07:46 GMT

ಹೊಸದಿಲ್ಲಿ, ಆ.7: ಸುಪ್ರೀಂ ಕೋಟ್ ಗೆ ನೇಮಕಗೊಂಡಿರುವ ಮೂರು ಮಂದಿ ನ್ಯಾಯಮೂರ್ತಿಗಳಾಧ   ಇಂದಿರಾ ಬ್ಯಾನರ್ಜಿ,  ವಿನೀತ್ ಸರಣ್ ಮತ್ತು ಕೆ.ಎಂ.ಜೋಸೆಫ್ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಮೂವರು ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಇದರೊಂದಿಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರ ಸಂಖ್ಯೆ 25ಕ್ಕೆ ಏರಿದೆ.

ನ್ಯಾಯಮೂರ್ತಿ ಬ್ಯಾನರ್ಜಿ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿದ್ದರು. ನ್ಯಾಯಮೂರ್ತಿ ಸರನ್ ಅವರು  ಒಡಿಶಾ ಮತ್ತು ಜೋಸೆಫ್ ಅವರು ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News