ಬಡವರ ಆಸ್ಪತ್ರೆ ಆರಂಭಿಸಲು ತನ್ನ ಮನೆಯನ್ನೇ ದಾನವಾಗಿ ನೀಡಿದ್ದ ಕರುಣಾನಿಧಿ

Update: 2018-08-08 08:27 GMT

ಚೆನ್ನೈ, ಆ.8: ಮಂಗಳವಾರ ನಿಧನರಾದ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ನಗರದ ಪ್ರತಿಷ್ಠಿತ ಗೋಪಾಲಪುರಂ ಪ್ರದೇಶದಲ್ಲಿರುವ ತಮ್ಮ ನಿವಾಸವನ್ನು 2010ರಲ್ಲಿ ಬಡವರಿಗಾಗಿ ಆಸ್ಪತ್ರೆ ಆರಂಭಿಸಲು ಕೊಡುಗೆಯಾಗಿ ನೀಡಿದ್ದರು.

ತಮ್ಮ 86ನೇ ಹುಟ್ಟುಹಬ್ಬದ ಸಂದರ್ಭ ಆವರು ತಮ್ಮ ತಾಯಿಯ ಸವಿನೆನಪಿಗಾಗಿ ಸ್ಥಾಪಿಸಲಾಗಿರುವ ಅಣ್ಣೈ ಅಂಜುಗಂ ಟ್ರಸ್ಟ್ ಗೆ ಈ ಮನೆಯನ್ನು ತಮ್ಮ ಹಾಗೂ ತಮ್ಮ ಪತ್ನಿಯ ಕಾಲಾನಂತರ ಬಡವರ ಆಸ್ಪತ್ರೆ ನಿರ್ಮಿಸುವ ಸಲುವಾಗಿ ದಾನ ಮಾಡಿದ್ದರು.

1968ರಲ್ಲಿ ಅವರು ಈ ಮನೆಯನ್ನು ತಮ್ಮ ಪುತ್ರರಾದ ಅಳಗಿರಿ, ಸ್ಟ್ಯಾಲಿನ್ ಹಾಗೂ ತಮಿಳರಸು ಅವರ ಹೆಸರುಗಳಲ್ಲಿ ನೋಂದಣಿ ಮಾಡಿಸಿದ್ದರೂ ನಂತರ 2009ರಲ್ಲಿ ಅವರ ಒಪ್ಪಿಗೆ ಪಡೆದು ನಂತರ ಅದನ್ನು ಟ್ರಸ್ಟ್ ಗೆ ದಾನ ಮಾಡಿದ್ದರು. ಈ ಮನೆಯನ್ನು ಕರುಣಾನಿಧಿ 1955ರಲ್ಲಿ ಖರೀದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News