ಕರುಣಾನಿಧಿ ತಂದೆ ಸಮಾನರು, ಅವರ ಸಾವು ಅತೀವ ದುಃಖ ತಂದಿದೆ: ಸೋನಿಯಾ ಗಾಂಧಿ

Update: 2018-08-08 13:50 GMT

ಹೊಸದಿಲ್ಲಿ, ಆ. 8: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕರುಣಾನಿಧಿ ಅವರು ತಂದೆಗೆ ಸಮಾನ. ಅವರು ಶ್ರೇಷ್ಟ ದಯೆ ಹಾಗೂ ಪರಿಗಣನೆ ತೋರಿಸುತ್ತಿದ್ದರು ಎಂದಿದ್ದಾರೆ.

 ಕರುಣಾನಿಧಿ ಅವರ ಪುತ್ರ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ‘‘ನಿಮ್ಮ ಪೂಜನೀಯ ಹಾಗೂ ಪ್ರೀತಿಪಾತ್ರರಾದ ತಂದೆ ವಿಧಿವಶರಾಗಿರುವುದು ನನಗೆ ಅತೀವ ದುಃಖ ತಂದಿದೆ. ಅವರ ನಿಧನದಿಂದ ವೈಯುಕ್ತಿಕವಾಗಿ ನನಗೆ ತುಂಬಾ ನಷ್ಟ ಉಂಟಾಗಿದೆ. ಅವರು ನನ್ನ ಬಗ್ಗೆ ಶ್ರೇಷ್ಟ ದಯೆ ಹಾಗೂ ಪರಿಗಣನೆ ತೋರಿಸುತ್ತಿದ್ದರು. ನಾನು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನನ್ನ ತಂದೆಗೆ ಸಮಾನ’’ ಎಂದಿದ್ದಾರೆ. ದೇಶ ಹಾಗೂ ತಮಿಳುನಾಡಿನ ರಾಜಕೀಯ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಅವರು ಅತ್ಯುನ್ನತ ವ್ಯಕ್ತಿ ಎಂದು ಅವರು ಹೇಳಿದರು.

 ತನ್ನ ದೀರ್ಘ ಹಾಗೂ ಉಜ್ವಲ ಬದುಕಿನಲ್ಲಿ ತಮಿಳುನಾಡಿನ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ, ಅಭಿವೃದ್ಧಿ, ಪ್ರಗತಿ ಹಾಗೂ ಸಮೃದ್ಧಿಗೆ, ಅಲ್ಲದೆ ಪ್ರತಿಯೊಬ್ಬ ನಾಗರಿಕನ ಮುಖ್ಯವಾಗಿ ಬಡವರು ಹಾಗೂ ದುರ್ಬಲರ ಉತ್ತಮಿಕೆಗೆ ಅವರು ಅಚಲವಾಗಿ ನಿಂತರು ಎಂದು ಅವರು ಹೇಳಿದರು. ತಮಿಳುನಾಡಿನ ಶ್ರೀಮಂತ, ವಿಭಿನ್ನ ಸಂಸ್ಕೃತಿ ಹಾಗೂ ಕಲೆಯನ್ನು ಉತ್ತೇಜಿಸಿದ ಹಾಗೂ ಜಾಗತಿಕ ಮಟ್ಟದಲ್ಲಿ ಗೌರವ ತಂದು ಕೊಟ್ಟ ಅದ್ಬುತ ಸಾಹಿತಿ ಕರುಣಾನಿಧಿ ಅವರು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News