ಚೀನಾದಲ್ಲಿ ಮುಸ್ಲಿಮರಿಂದ ಭಾರೀ ಪ್ರತಿಭಟನೆ: ಮಸೀದಿ ನೆಲಸಮ ಯೋಜನೆ ನಿಲ್ಲಿಸಿದ ಸರಕಾರ

Update: 2018-08-10 10:15 GMT

ಬೀಜಿಂಗ್, ಆ.10: ಮುಸ್ಲಿಮರ ಭಾರೀ ಪ್ರತಿಭಟನೆಯ ನಂತರ ಹೊಸದಾಗಿ ನಿರ್ಮಿಸಲಾಗಿದ್ದ ಮಸೀದಿಯೊಂದನ್ನು ಧ್ವಂಸಗೈಯುವ ಯೋಜನೆಯನ್ನು ಚೀನಾ ಅಧಿಕಾರಿಗಳು ಮುಂದೂಡಿದ್ದಾರೆ.

ಸಾವಿರಾರು ಪ್ರತಿಭಟನಕಾರರು ವಿಝೌ ಮಸೀದಿ ಹೊರಭಾಗದಲ್ಲಿ ಜಮಾಯಿಸಿ ಮಸೀದಿಯನ್ನು ನೆಲಸಮಗೊಳಿಸುವ ಸ್ಥಳೀಯ ಆಡಳಿತದ ಯೋಜನೆಯನ್ನು ವಿರೋಧಿಸಿದರು. ಬೆಳಗ್ಗಿನಿಂದ ತಡರಾತ್ರಿಯವರೆಗೆ ಪ್ರತಿಭಟನೆ ನಡೆಯಿತು.

ಸ್ಥಳಕ್ಕಾಗಮಿಸಿದ ಅಧಿಕಾರಿಯೊಬ್ಬರು ಪ್ರತಿಭಟನಕಾರರು ಮನೆಗೆ ತೆರಳುವಂತೆ ವಿನಂತಿಸಿದರು ಹಾಗು ಸರಕಾರವು ಮಸೀದಿಯನ್ನು ನೆಲಸಮಗೊಳಿಸುವ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News