ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿ : ಶಿವಯೋಗಿಸ್ವಾಮಿ

Update: 2018-08-10 18:23 GMT

ದಾವಣಗೆರೆ,ಆ.10 :  ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಹಾಗೂ ಹೋಬಳಿ ಹಂತಕ್ಕೆ ಹೋಗಿ ಸಾರ್ವಜನಿಕರ ಸಂಪರ್ಕ ಸಭೆ ನಡೆಸಿ ಜನರ ಕುಂದು ಕೊರತೆ ಆಲಿಸಿ ಸಾಧ್ಯವಾದಷ್ಟು ಅಲ್ಲಿಯೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೇಂದು ಪ್ರಾದೇಶಿಕ ಆಯುಕ್ತ ಶಿವಯೋಗಿಸ್ವಾಮಿ ಸಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು. 

ಜಿ.ಪಂ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಮುಖ್ಯಮಂತ್ರಿಗಳ ನಿರ್ದೇಶನ ಹಾಗೂ ಆಶಯದಂತೆ ಸರ್ಕಾರದ ಯೋಜನೆಗಳು ನಿಗದಿತ ಸಮಯದಲ್ಲಿ ಜನರಿಗೆ ತಲುಪಿಸಬೇಕು. ಹಾಗೂ ಜಾರಿಯಾಗುತ್ತಿರುವ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತವೆಯೇ ಎಂಬ ಬಗೆಗೆ ಪರಿಶೀಲಿಸಬೇಕು. ಕೇವಲ ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೇ ವಿವಿಧ ಇಲಾಖಾ ಅಧಿಕಾರಿಗಳು ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನ್ಮುಖರಾಗಬೇಕೇಂದರು.

ಸಾಲ ಮನ್ನಾ ಯೋಜನೆಯಡಿ ಈವರೆಗೆ 1 ಲಕ್ಷದ ವರೆಗಿನ ಸಾಲಗಳು ಮನ್ನಾ ಆಗಿದ್ದು ಒಂದು ಕುಟುಂಬದಲ್ಲಿ ಇಬ್ಬರೂ ಸಾಲ ಪಡೆದಿದ್ದರೂ ಕೂಡ  ಅಂತಹ ಸಾಲಗಳು ಕೂಡಾ ಮನ್ನಾ ಆಗಿವೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಯಾವುದೇ ರೈತರು ಆತ್ಮ ಹತ್ಯೆಗೆ ಒಳಗಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದರು. 

ಸಮಾಜದ ದುರ್ಬಲರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಖುದ್ದು ಅಲ್ಲಿನ ಸಮಸ್ಯೆಗಳನ್ನು ನೋಡಿ ಬಗೆಹರಿಸಲು ಶ್ರಮಿಸಬೇಕೇಂಬುವುದು ಮಾನ್ಯ ಮುಖ್ಯಮಂತ್ರಿಗಳ ಆಶಯವಾಗಿದೆ. ಅದರಂತೆ ಅಧಿಕಾರಿಗಳು ಸಾಮಾಜಿಕ ಭದ್ರತೆ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಲಯಗಳು ಹಲವಾರು ಗ್ರಾಮಗಳಲ್ಲಿ ಸ್ಮಶಾನಗಳಿಗೆ ಭೂಮಿ ಇಲ್ಲವೆಂದು ದೂರುಗಳಿವೆ. ಅವೆಲ್ಲವುಗಳನ್ನು ಗಮನಿಸಿ ಹಾಗೂ ಕೌಶಲ್ಯಭಿವೃದ್ದಿಗೆ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗ ದೊರೆಯುವಂತೆ ಹಾಗೂ ಬೆಂಗಳೂರು ಭಾಗದ ಕಂಪನಿಗಳ ಅಧಿಕಾರಿಗಳನ್ನು ಜಿಲ್ಲಾಮಟ್ಟಕ್ಕೆ ಕರೆಯಿಸಿ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವಂತೆ ಮಾಡಬೇಕಾಗಿದೆ ಎಂದರು.

ಉದ್ಯೋಗಮೇಳ ಮಾಡಿದಾಗ ನೂರಲ್ಲಿ ಕನಿಷ್ಠ 10 ಮಂದಿಗಾದರೂ ಉದ್ಯೋಗ ದೊರೆತರೇ ಅದು ದೊಡ್ಡ ಯಶಸ್ಸು ಈ ನಿಟ್ಟಿನಲ್ಲಿ ಉದ್ಯೋಗ ವಿನಿಮಯ ಅಧಿಕಾರಿಗಳು ಕಾರ್ಮಿಕ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕೇಂದರು.

ಸರೋಜಿನಿ ಮಹಿಷಿ ವರದಿ ಪರಿಣಾಮಾಕಾರಿಯಾಗಿ ಜಾರಿಯಾಗುತ್ತಿದೆಯೇ ಎಂಬ ಬಗೆಗೆ ಹಾಗೂ ಸಂಬಂಧಿಸಿದ ಕಾರ್ಮಿಕ ಅಧಿಕಾರಿಗಳು ಸ್ಥಳೀಯ ಕಾರ್ಖಾನೆಗಳಿಗೆ ಭೇಟಿ ನೀಡಿ ಕನ್ನಡಿಗರಿಗೆ ಲಭ್ಯವಾಗಿರುವ ಉದ್ಯೋಗಗಳ ಬಗೆಗೆ ಮಾಹಿತಿ ಪಡೆದುಕೊಳ್ಳಬೇಕೆಂದರು.

ಸಮಾಜಕಲ್ಯಾಣ ಇಲಾಖೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆಗಳ ಹಾಸ್ಟೆಲ್‍ಳಗೆ ಸ್ಥಿತಿಗತಿ, ನಿವೇಶನ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‍ಗಳಿಗೆ ನಿವೇಶನ ಪಡೆಯಲು ಆಗಿರುವ ಬೆಳವಣಿಗೆಗಳ ಬಗೆಗೆ ಮಾಹಿತಿ ಪಡೆದ ಆಯುಕ್ತರು ನಗರ ವ್ಯಾಪ್ತಿಯಲ್ಲಿ ನಿವೇಶನ ಸಿಗುವುದು. ಕಷ್ಟಕರ ಹಾಗಾಗಿ ಇರುವ ನಿವೇಶನದಲ್ಲಿ ಮೇಲಂತ್ತಸ್ತುಗಳ ಮಾದರಿಯಲ್ಲಿ ನಿರ್ಮಿಸಿದರೆ ಅನೂಕೂಲವಾಗಬಹುದು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಎಲ್ಲಾ ಇಲಾಖೆಯ ಹಾಸ್ಟೆಲ್‍ಗಳನ್ನು ಒಂದೇ ಕಡೆ ಮಾಡಿ ಹಾಸ್ಟೆಲ್ ಸಂಕೀರ್ಣ ಮಾಡಲು ಉದ್ದೇಶಿಸಲಾಗಿದೆ.

ರೇಷ್ಮೆ ಇಲಾಖೆಯ 5 ಎಕರೆಯಷ್ಟು ಜಮೀನು ಲಭ್ಯವಿದ್ದು ಅಲ್ಲಿ ಎಲ್ಲಾ ಇಲಾಖೆಯ ಹಾಸ್ಟೆಲ್‍ಗಳು ಒಂದೇ ಕಡೆ ನಿರ್ಮಿಸಲಾಗುವುದು. ಎಂದರು.
 ಕೇವಲ ಹಾಸ್ಟೆಲ್ ನಿರ್ಮಿಸಿದರೆ ಸಾಲದು ವಿದ್ಯಾರ್ಥಿಗಳು ಚನ್ನಾಗಿ ಓದುವಂತೆ ನೋಡಿಕೊಳ್ಳಬೇಕು. ವಿವಿಧ ಹಂತದ ಅಧಿಕಾರಿಗಳು ಹಾಸ್ಟೆಲ್‍ಗಳಿಗೆ ಭೇಟಿ ನೀಡಬೇಕು. ಹಾಸ್ಟೆಲ್‍ಗಳಲ್ಲಿ ಸಂದರ್ಶಕರ ರಿಜಿಸ್ಟರ್ ಇಡಬೇಕು. ಪ್ರಮುಖ ವ್ಯಕ್ತಿಗಳು ಯಾರು ಭೇಟಿ ನೀಡಿದ್ದಾರೆ ಎಂಬ ಬಗೆಗೆ ದಾಖಲಿಸಬೇಕೇಂದರು. ಹಾಗೂ ಹಾಸ್ಟೆಲ್‍ಗಳಲ್ಲಿ ಬಯೋಮಟ್ರಿಕ್ ಅಳವಡಿಸಿ ವಿದ್ಯಾರ್ಥಿಗಳ ಹಾಜರಾತಿಯನ್ನು ಸರಿಯಾಗಿ ನಿರ್ವಹಿಸಬೇಕೇಂದರು ಪ್ರತಿ ಹಾಸ್ಟೆಲ್‍ಗಳಿಗೆ ಆರೋಗ್ಯ ಇಲಾಖೆಯಿಂದ  ವೈದ್ಯರುಗಳು ಹೋಗಿ ನಿಯಮಿತವಾಗಿ ಆರೋಗ್ಯ  ತಪಾಸಣೆ ನಡೆಸಬೇಕು. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಉತ್ತ್ತರಿಸಿದ ಅಧಿಕಾರಿಗಳು ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಶಿಕ್ಷಕರ ಕೊರತೆಯಿದೆ ಕೌನ್ಸಿಲಿಂಗ್ ನಡೆಯುತ್ತಿದ್ದು ಈ ಕೊರತೆ ತುಂಬಲಾಗುವುದು ಹಾಗೂ ಅತಿಥಿ ಉಪನ್ಯಾಸಕರನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುವುದು ಎಂದರು.  

ಘನ ತ್ಯಾಜ ವಿಲೇವಾರಿ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ವಿಲೇವಾರಿ ಸಮಸ್ಯೆ ಇಲ್ಲ. ನಗರ ಪ್ರದೇಶದಲ್ಲಿ ಸುಶಾಂತ ಬಯೋ ಏಜನ್ಸಿಗೆ ನೀಡಲಾಗಿದೆ. ಮೆಡಿಕಲ್ ವೆಸ್ಟೇಜ್‍ನ್ನು ಕೂಡಾ ಇದೇ ಏಜನ್ಸಿಯವರು ನಿರ್ವಹಿಸುತ್ತಾರೆಂದರು. ಕೆರೆ ಒತ್ತುವರಿ ಬಗ್ಗೆ ಕೇಳಿದ ಪ್ರಶ್ನೆಗೆ ಶಾಂತಿ ಸಾಗರ ಕೆರೆ 5 ಸಾವಿರ ಎಕರೆ ವಿಸ್ತಾರವಾಗಿದ್ದು 44 ಹಳ್ಳಿಗಳು ಆ ವ್ಯಾಪ್ತಿಯಲ್ಲಿ ಬರುತ್ತವೆ. ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ.

ಇಲಾಖೆಯಲ್ಲಿ ಸರ್ಕಾರಿ ಸರ್ವೇಯರ್‍ಗಳ ಕೊರತೆಯಿದ್ದು, 43 ಹೆಚ್ಚುವರಿ ಸರ್ವೆಯರ್‍ಗಳನ್ನು ನೀಡಿದಾರೆ. ಅವರುಗಳು ತರಬೇತಿಯಲ್ಲಿದ್ದು, ಶೀಘ್ರದಲ್ಲಿ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಭೂಮಾಪನ ಇಲಾಖಾ ಉಪ ನಿರ್ದೆಶಕರು ತಿಳಿಸಿದರು. 

ನಿವೇಶನ ರಹಿತರಿಗೆ ಸರ್ಕಾರಿ ಜಾಗ ಇದ್ದರೆ ಕೂಡಲೇ ನಿವೇಶನ ನೀಡಿ ಇಲ್ಲದಿದ್ದ ಪಕ್ಷದಲ್ಲಿ ಖಾಸಗಿಯವರಿಂದ ಖರೀದಿಸಿ ನೀಡಿ ಹಾಗೂ ಪರಿಶಿಷ್ಟ ಜಾತಿ ವರ್ಗಗಳ ಜನರ ಸ್ಮಶಾನಗಳಿಗೆ ಭೂಮಿ ಲಭ್ಯತೆ  ಬಗೆಗೆ ಕೇಳಿದಾಗ ಅಪರ ಜಿಲ್ಲಾಧಿಕಾರಿ 92 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ. ಎಲ್ಲೆಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆಯೇ ಅವುಗಳನ್ನು ಬಿಡಿಸಿ ನೀಡುವ ಕಾರ್ಯ ಕೈಗೊಳ್ಳಲಾಗಿದೆ ಎಂದರು

ಸ್ಮಶಾನ ಭೂಮಿ ಖರೀದಿ ಮತ್ತು ಅಭಿವೃದ್ದಿಗೆ 1 ಕೋಟಿ ಅನುದಾನವಿದ್ದು ಸರಿಯಾಗಿ ಬಳಸಿಕೊಳ್ಳಿ. ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಸರ್ಕಾರದ ಮಟ್ಟದಲ್ಲಿ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆಂದು ಪ್ರಾದೇಶಿಕ ಆಯುಕ್ತರು ತಿಳಿಸಿದರು.
 ಕುಡಿಯುವ ನೀರು ಜಗಳೂರು ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿ ಟ್ಯಾಂಕರುಗಳ ಮೂಲಕ ಪೂರೈಕೆಯಾಗಿರುತ್ತದೆ. ಟ್ಯಾಂಕರ್‍ಗಳಿಗೆ ಜಿ.ಪಿ.ಎಸ್ ಅಳವಡಿಸಲಾಗಿದೆ ಹಾಗೂ ವಾರಕ್ಕೊಮ್ಮೆ ಅವರಿಗೆ ಹಣ ಪಾವತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯು ಬಯಲು ಶೌಚಾಮುಕ್ತ  ಜಿಲ್ಲೆಯಾಗಿದ್ದು, ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯಗಳು ಇವೆಯೇ ಎಂದು ಕೇಳೀದಾಗ ಡಿ.ಡಿ.ಪಿ.ಎ ಉತ್ತರಿಸಿ ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯಗಳಿವೆ. ಆದರೆ ನಿರ್ವಹಣೆ ಇಲ್ಲರಾಗಿದೆ. ಹಾಗೂ ಕೆಲವಡೆ ದುರಸ್ತಿ ಕೂಡ ಆಗಬೇಕಾಗಿದೆ ಎಂದರು. ಶೌಚಾಲಯವಿಲ್ಲದ ಕಡೆ ಶೌಚಾಲಯ ನಿರ್ಮಿಸಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ 35 ಸಾವಿರ ಹಣ ನೀಡಲಾಗುತ್ತದೆ ಎಂದರು ಜಿ.ಪಂ ಉಪಕಾರ್ಯದರ್ಶಿ ಷಡಾಕ್ಷರಪ್ಪ ತಿಳಿಸಿದರು. ಶಿಕ್ಷಣ ಇಲಾಖೆಯ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಸಂಬಳ ಹಾಗೂ ಗೌರವಧನ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ ಹಾಗೂ ಆರೋಗ್ಯ ಸಹಾಯಕರಿಗೂ ನಿಗದಿತ ಸಮಯದಲ್ಲಿ ಗೌರವಧನ ಪಾವತಿಯಾಗುತ್ತಲ್ಲವೇಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿ.ಪಂ ಸಿಇಒ ಅಶ್ವತಿ ಉಪಕಾರ್ಯದರ್ಶಿಯವರು ಷಡಾಕ್ಷರಪ್ಪ ಯೋಜನಾಧಿಕಾರಿ ಬಸನಗೌಡ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News