ಚಿಕ್ಕಮಗಳೂರು: ಸಾಗುವಳಿ ಭೂಮಿಯ ಹಕ್ಕುಪತ್ರಕ್ಕೆ ಒತ್ತಾಯಿಸಿ ಧರಣಿ

Update: 2018-08-13 18:44 GMT

ಚಿಕ್ಕಮಗಳೂರು,ಆ.13: ಚಿಕ್ಕಮಗಳೂರು ತಾಲೂಕು ವಸ್ತಾರೆ ಹೋಬಳಿ ಮುಳ್ಳುವಾರೆ ಗ್ರಾಮದ ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಕೆಸರಿಕೆ, ಮುಳ್ಳುವಾರೆ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಚಿಕ್ಕಮಗಳೂರು ತಾಲೂಕು ವಸ್ತಾರೆ ಹೋಬಳಿ ಆಣೂರು ಗ್ರಾಮದ ಸರ್ವೇನಂ 261ರಲ್ಲಿ 184 ಎಕರೆ 12 ಗುಂಟೆ ಮತ್ತು ಸರ್ವೆನಂ. 154ರಲ್ಲಿ 31 ಎಕರೆ ಗೋಮಾಳದಲ್ಲಿ 2 ಗ್ರಾಮಸ್ಥರು ಸಾಗುವಳಿ ಮಾಡುತ್ತಿದ್ದು ಅರಣ್ಯ ಇಲಾಖೆ ಮತ್ತು ಭಾರಿ ಭೂಮಾಲೀಕರು ತೊಂದರೆಯುಂಟು ಮಾಡುತ್ತಿದ್ದು, ಸಾಗುವಳಿ ಮಾಡುತ್ತಿರುವ 180 ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

ಈ ಸಂದರ್ಭ ಸಂಘಟನೆಯ ಅಧ್ಯಕ್ಷ ಕೆ.ಎನ್.ಉದ್ದಪ್ಪ, ಜಿಲ್ಲಾಧ್ಯಕ್ಷ ಸುರೇಶ್, ಉಮೇಶ್‍ ಕುಮಾರ್, ಮುಖಂಡರಾದ ರಾಜರತ್ನಂ, ವಸಂತಕುಮಾರ್, ಕುಮಾರ್, ಕೆ.ಎಂ.ರಾಜು, ರಂಗನಾಥ್ ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News