36 ವರ್ಷಗಳ ಬಳಿಕ ಪಾಕಿಸ್ತಾನ ಜೈಲಿನಿಂದ ಬಿಡುಗಡೆಗೊಂಡ ಗಜಾನಂದ ಶರ್ಮಾ

Update: 2018-08-13 19:05 GMT

ಹೊಸದಿಲ್ಲಿ, ಆ. 13: ಪಾಕಿಸ್ತಾನದ ಲಾಹೋರ್‌ನ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದ ಭಾರತೀಯ ಪ್ರಜೆ ಗಜಾನಂದ ಶರ್ಮಾ ಸಹಿತ 29 ಭಾರತೀಯ ಕೈದಿಗಳನ್ನು ಪಾಕಿಸ್ತಾನ ಸರಕಾರ ಸೋಮವಾರ ಬಿಡುಗಡೆ ಮಾಡಿದೆ. ಸರಕಾರ ನಮಗೆ ಸ್ವಾತಂತ್ರ್ಯ ದಿನದ ಕೊಡುಗೆ ನೀಡಿದೆ ಎಂದು ಬಿಡುಗಡೆಯಾಗಿರುವ ಗಜಾನಂದ ಶರ್ಮಾ ಅವರನ್ನು ಕರೆದೊಯ್ಯಲು ಆಗಮಿಸಿದ ಸೆಹ್‌ದೇವ್ ಶರ್ಮಾ ಹೇಳಿದ್ದಾರೆ. 

ಸೆಹ್‌ದೇವ್ ಶರ್ಮಾ ಪಂಜಾಬ್ ಮೂಲದ ಹೋರಾಟಗಾರ ಈಗ 68 ವರ್ಷವಾಗಿರುವ ಗಜಾನಂದ ಶರ್ಮಾ ಅವರು 38ನೇ ವರ್ಷದಲ್ಲಿ ನಾಪತ್ತೆಯಾಗಿದ್ದರು. ಅವರು ಪ್ರಮಾದವಶಾತ್ ಭಾರತ-ಪಾಕ್ ಗಡಿಯನ್ನು ದಾಟಿದ್ದರು. ಗಜಾನಂದ ಶರ್ಮಾ ಜೀವಂತವಾಗಿದ್ದಾರೆ ಹಾಗೂ ಅವರನ್ನು ಲಾಹೋರ್‌ನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂಬ ವಿಚಾರ ಅವರ ಕುಟುಂಬದವರಿಗೆ ಆಘಾತ ಉಂಟು ಮಾಡಿತ್ತು. ಶರ್ಮಾ ಅವರ ಪೌರತ್ವವನ್ನು ಸಾಬೀತುಪಡಿಸುವ ಬಗ್ಗೆ ಕೆಲವು ದಾಖಲೆಗಳು ಪಾಕಿಸ್ತಾನದಿಂದ ಜೈಪುರದ ಪೊಲೀಸ್ ಅಧೀಕ್ಷ (ಗ್ರಾಮೀಣ)ರು ಸ್ವೀಕರಿಸಿದ ಬಳಿಕ ಶರ್ಮಾ ಅವರು ಬದುಕಿದ್ದಾರೆ ಎಂಬುದು ದೃಢಪಟ್ಟಿತ್ತು. ದಾಖಲೆಗಳನ್ನು ಪರಿಶೀಲಿಸಿದ ಶರ್ಮಾ ಅವರ ಕಿರಿಯ ಪುತ್ರ ಮುಖೇಶ್ ಶರ್ಮಾ ಇದು ತನ್ನ ತಂದೆ ಎಂದು ಗುರುತಿಸಿದ್ದರು. ಬಹುಕಾಲದಿಂದ ದೂರವಿದ್ದ ತನ್ನ ಪತಿ ಈಗಲಾದರೂ ಹಿಂದೆ ಬರುವರು ಎಂದು ಮಖ್ನಿ ದೇವಿ ನಿರೀಕ್ಷೆಯಲ್ಲಿದ್ದರು. ಮಾನವೀಯತೆ ನೆಲೆಯಲ್ಲಿ ಪಾಕಿಸ್ತಾನ ಸರಕಾರ ಸೋಮವಾರ 26 ಬೆಸ್ತರ ಸಹಿತ 29 ಮಂದಿ ಭಾರತೀಯರನ್ನು ಸೋಮವಾರ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News