ಪ್ರಧಾನಿ ಮೋದಿ ಇಮ್ರಾನ್ ಖಾನ್‌ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು: ಪಾಕ್ ರಾಯಭಾರಿ

Update: 2018-08-14 11:31 GMT

ಹೊಸದಿಲ್ಲಿ, ಆ.14: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಬಳಿಕ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್‌ಗೆ ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಚುನಾವಣೆಯ ಮೂಲಕ ನೀವು ಚುನಾಯಿತರಾಗಿದ್ದು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿದ್ದರು ಎಂಬುದಾಗಿ ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ಹೈಕಮಿನಶರ್ ಸೊಹೈಲ್ ಮಹಮೂದ್ ಬಹಿರಂಗಪಡಿಸಿದ್ದಾರೆ.

 ‘‘ಜು.25 ರಂದು ನಡೆದಿದ್ದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ್ದ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್‌ಗೆ ಜು.30 ರಂದು ಕರೆ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದರು. ಇಂತಹ ಹೆಜ್ಜೆಗಳು ನೆರೆಯ ದೇಶಗಳ ಸಂಬಂಧವನ್ನು ವೃದ್ದಿಸಲು ಸಹಕಾರಿಯಾಗುವ ಸಾಧ್ಯತೆಯಿದೆ’’ ಎಂದು ಪಾಕಿಸ್ತಾನದ 72ನೇ ಸ್ವಾತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ಧ್ವಜಾರೋಹಣಗೊಳಿಸಿದ ಬಳಿಕ ಮಹಮೂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News