ರಾಜ್ಯದ ಅಭಿವೃದ್ಧಿಗೆ ಇಸ್ರೇಲ್ , ಚೀನಾ ಮಾದರಿ ಯೋಜನೆ: ಸಿಎಂ ಕುಮಾರಸ್ವಾಮಿ

Update: 2018-08-15 05:26 GMT

ಬೆಂಗಳೂರು, ಆ.15: ರಾಜ್ಯದ ಅಭಿವೃದ್ಧಿಗೆ ಇಸ್ರೇಲ್, ಚೀನಾ ಮಾದರಿಯನ್ನು ರೂಪಿಸಲಾಗುವುದು ಎಂದು ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

 72 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು   ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣವಾಗಿದ್ದು,  ಹೂಡಿಕೆಯಲ್ಲಿ  ಕರ್ನಾಟಕ ರಾಜ್ಯವೇ ನಂ.1 ಆಗಿದೆ ಎಂದು ಅಭಿಪ್ರಾಯಪಟ್ಟರು.

 ಅಭಿವೃದ್ಧಿ ವಿಷಯದಲ್ಲಿ ಚೀನಾದ ಯಶಸ್ಸು ನಮಗೆ ಮಾದರಿಯಾಗಬೇಕು. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು,  ನೀರಿನ ಸದ್ಬಳಕೆಗೆ ಇಸ್ರೇಲ್ ಮಾದರಿ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುವುದು . ಬೆಂಗಳೂರಿಗೆ ವಿಶ್ವ ದರ್ಜೆಯ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ  ಕೆಲವು ಭಾಗಗಳಲ್ಲಿ ಮಳೆ ಉತ್ತಮವಾಗಿದ್ದರೂ 13 ಜಿಲ್ಲೆಗಳಲ್ಲಿ ಬರಗಾಲ ಇದೆ ಕೆಲವೆಡೆ ಸುರಿದ ಭಾರೀ  ಮಳೆಯಿಂದಾಗಿ ಹಲವು ಸೇತುವೆಗಳು ಹಾಳಾಗಿದೆ. 451 ಸಂಪರ್ಕ ಸೇತುವೆ ನಿರ್ಮಿಸಲಾಗುವುದು  ಎಂದು ಮಾಹಿತಿ ನೀಡಿದರು.

ರೈತರ  49 ಸಾವಿರ ಕೋಟಿ ಸಾಲ ಮನ್ನಾಗೆ ನಿರ್ಧಾರ ಮಾಡಲಾಗಿದೆ, ಇದರಿಂದಾಗಿ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡಿರುವ 22 ಲಕ್ಷ ರೈತರಿಗೆ ಅನುಕೂಲವಾಗಿದ್ದು, ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾಗೆ ಶೀಘ್ರವೇ ಆದೇಶ ನೀಡಲಾಗುವುದು ಎಂದರು.

ಹಿಂದಿನ ಸರಕಾರದ ಹಾಗೂ ಮೈತ್ರಿ ಸರಕಾರದ ಆಯವ್ಯಯ ಜಾರಿಗೆ ಬದ್ಧ. ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸರಕಾರದ ಕೆಲ ಇಲಾಖೆಗಳನ್ನು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News