ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸ್ವಾತಂತ್ರೋತ್ಸವ ಆಚರಣೆ

Update: 2018-08-15 18:32 GMT

ಮಡಿಕೇರಿ, ಆ.15: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 72ನೇ ಸ್ವಾತಂತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಧ್ವಜಾರೋಹಣವನ್ನು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಸೇವಾದಳದ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಮಡಿಕೇರಿ ಬ್ಲಾಕ್ ಸೇವಾದಳದ, ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಮತ್ತಿತರ ಪ್ರಮುಖರು ನೆರವೇರಿಸಿದರು.

ಮಡಿಕೇರಿ ನಗರಾಧ್ಯಕ್ಷ ಅಬ್ದುಲ್ ರಝಾಕ್, ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ, ವಿ.ಜಿ.ಮೋಹನ್, ಮಂದ್ರಿರ ಮೋಹನ್ ದಾಸ್, ನಗರ ಮಹಿಳಾ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಸೇವಾದಳದ ನಗರ ಮಹಿಳಾ ಅಧ್ಯಕ್ಷೆ ಪ್ರೇಮಾ ಕೃಷ್ಣಪ್ಪ, ಪವನ್ ತಿಮ್ಮಯ್ಯ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ತಜಸುಂ, ಯತೀಶ್, ಉದಯಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಪದಾಧಿಕಾರಿಗಳಾದ ಶಶಿ, ಮುನೀರ್ ಮಾಚಾರ್, ಸೇವಾದಳದ ಕಾರ್ಯದರ್ಶಿ ಡಿ.ಎಲ್.ಸುಬ್ಬಯ್ಯ, ಶರಣು ನಂಜಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News