ವಾಜಪೇಯಿ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಶಾಸಕ ರೇಣುಕಾಚಾರ್ಯ

Update: 2018-08-17 18:34 GMT

ಹೊನ್ನಾಳಿ,ಆ.17: ಭಾರತಾಂಬೆಯ ಹೆಮ್ಮೆಯ ಪುತ್ರರಾಗಿ ಭಾರತದ ಭವ್ಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಬಿಜೆಪಿಯ ಹಿರಿಯ ಕಟ್ಟಾಳು ಅಜಾತಶತ್ರು ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರು ನಮ್ಮನ್ನಗಲ್ಲಿರುವುದು ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಮಾಜಿಸಚಿವ ಶಾಸಕ ಎಂ.ಪಿ ರೇಣುಕಾಚಾರ್ಯ ನುಡಿದರು. 

ಪಟ್ಟಣದ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ತಾಲೂಕು ಬಿಜೆಪಿಯಿಂದ, ವಾಜಪೇಯಿಯವರ ಭಾವಚಿತ್ರದೊಡನೆ ಮೌನ ಮೆರವಣಿಗೆಯಲ್ಲಿ ಪಾದಯಾತ್ರೆಯಲ್ಲಿ ತೆರಳಿ ಖಾಸಗಿ ಬಸ್ ನಿಲ್ದಾಣದ ಬಳಿ ಪುಷ್ಪ ನಮನ ಅರ್ಪಿಸಿ ಶ್ರದ್ದಾಂಜಲಿ ಕೋರಿ ಮಾತನಾಡಿದರು.

ಜನಸಂಘದ ಸಂಸ್ಥಾಪಕರಲ್ಲೂಬ್ಬರಾಗಿ ಬಿಜೆಪಿಯ ಸಂಘಟನೆಗಾಗಿ ತುರ್ತುಪರಿಸ್ಥಿತಿ ಇನ್ನಿತರೆ ಸಂದರ್ಭಗಳಲ್ಲಿ ಸೆರೆವಾಸ ಅನುಭವಿಸಿದರು. ವಿದೇಶಾಂಗ ಸಚಿವರಾಗಿ ದೇಶದ ಪ್ರಧಾನಿಗಳಾಗಿ ಸತತ 5 ವರ್ಷಗಳ ಆಡಳಿತ ನಡೆಸಿ ಪ್ರಥಮ ಕಾಂಗ್ರೇಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಮ್ಮ ಆಡಳಿತದಲ್ಲಿ ಭಾರತವನ್ನು ವಿಶ್ವದಲ್ಲಿಯೇ ಮಾದರಿ ದೇಶವನ್ನಾಗಿ ಮಾಡುವ ಚಿಂತನೆ ನಡೆಸಿದ್ದನ್ನು ಇಡೀ ದೇಶದ ಜನತೆ ಇಂದು ಸ್ಮರಿಸುತ್ತಿದ್ದಾರೆ, ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ದಿಯ ಹರಿಕಾರರೆನಿಸಿದ್ದರು. ಇಂತಹ ಮಹಾನ್ ನಾಯಕ ನಮ್ಮನ್ನಗಲಿರುವುದು ದೇಶದ ರಾಜಕೀಯ ರಂಗಕ್ಕೆ ಅಪಾರ ನಷ್ಟವುಂಟಾಗಿದೆ ಎಂದರು. 

ತಾ. ಬಿಜೆಪಿ ಅಧ್ಯಕ್ಷ ಡಿ.ಜಿ ರಾಜಪ್ಪ, ಜಿ.ಪಂ ಸದಸ್ಯ ಸುರೇಂದ್ರ ನಾಯ್ಕ ತಾ.ಬಿಜೆಪಿ ಪ್ರ.ಕಾ ಅರಕೆರೆ ನಾಗರಾಜ್ ಜಿ.ಯುವ ಮೋರ್ಚ ಉಪಾಧ್ಯಕ್ಷ ಕೊನಾಯ್ಕನಳ್ಳಿ ಮಂಜುನಾಥ್ ಜಿ.ಬಿಜೆಪಿ ಕಾರ್ಯದರ್ಶಿ ಮಂಜುನಾಥ್ ಜಿಲ್ಲಾ ರೈತಾ ಮೋರ್ಚ ಅಧ್ಯಕ್ಷ ಶಾಂತರಾಜ್ ಪಾಟೀಲ್ ತಾ,ರೈತ ಮೋರ್ಚಾ ಅಧ್ಯಕ್ಷ ಎನ್.ಹೆಚ್ ರವೀಂದ್ರನಾಥ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News