ಪ್ರಧಾನಿ ಮೋದಿ 'ಹೀರೊ' ಎಂದ ಪಾಟ್ನಾ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿ !

Update: 2018-08-18 11:07 GMT

ಪಾಟ್ನಾ, ಆ.18: ಪಾಟ್ನಾ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಇತ್ತೀಚೆಗೆ ನೇಮಕಗೊಂಡ ನ್ಯಾಯಮೂರ್ತಿ ಮುಕೇಶ್ ರಸಿಕ್ ಭಾಯ್ ಶಾ, ಪ್ರಧಾನಿ ನರೇಂದ್ರ ಮೋದಿಯವರನ್ನು "ಮಾಡೆಲ್ ಮತ್ತು ಹೀರೊ" ಎಂದು ಬಣ್ಣಿಸಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಜತೆಗೆ ಇರುವ ಸಂಬಂಧದ ಬಗ್ಗೆ 'ಅಮರ್ ಉಜಾಲ' ಪ್ರಶ್ನಿಸಿದಾಗ ಪಟ್ನಾ ಹೈಕೋರ್ಟ್ ಸಿಜೆ ಈ ಮೇಲಿನಂತೆ ಬಣ್ಣಿಸಿದರು.

"ಕ್ಯೋಂಕಿ ನರೇಂದ್ರ ಮೋದಿ ಏಕ್ ಮಾಡೆಲ್ ಹೈ. ವಹ್ ಏಕ್ ಹೀರೊ ಹೆ. ಜಹಾ ತಕ್ ಮೋದಿ ಕಿ ಬಾತ್ ಹೈ ತೋ ಪಿಚಲೆ ಏಕ್ ಮಹಿನ್ ಸೆ ಯಹಿ ಚಲ್ ರಹಾ ಹೈ. ಸೋಶಿಯಲ್ ಮೀಡಿಯಾ ಪರ್ ಇಸೆ ಸೈಕ್ದೊ ಕ್ಲಿಪ್ಪಿಂಗ್ ಹೆ. ರೊಝ್ ಪೇಪರ್ ಮೆ ಬಿ ಯಹಿ ಚಲ್‍ ತಾ ಹೈ" (ಮೋದಿ ಮಾಡೆಲ್ ಆಗಿರುವುದರಿಂದ ಅವರು ಹೀರೊ. ಮೋದಿ ಬಗ್ಗೆ ಹೇಳಬೇಕೆಂದರೆ, ಕಳೆದ ಕೆಲ ತಿಂಗಳುಗಳಿಂದ ಇದು ಇದೆ. ಸಮಾಜ ಮಾಧ್ಯಮಗಳಲ್ಲಿ ಸಾವಿರಾರು ಕ್ಲಿಪ್ಪಿಂಗ್‍ಗಳಿವೆ. ಪತ್ರಿಕೆಗಳು ಕೂಡಾ ದಿನಾ ಇದನ್ನೇ ಪ್ರಕಟಿಸುತ್ತಿವೆ) ಎಂದು ಹೇಳಿದರು.

ಗುಜರಾತ್ ಮೂಲದ ನ್ಯಾಯಮೂರ್ತಿ ಶಾ, 1982ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಗುಜರಾತ್ ಹೈಕೋರ್ಟ್‍ನಲ್ಲಿ ಮತ್ತು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ 20 ವರ್ಷಗಳ ಕಾಲ ಸಿವಿಲ್, ಕ್ರಿಮಿನಲ್, ಸಂವಿಧಾನ, ತೆರಿಗೆ, ಕಾರ್ಮಿಕ, ಸೇವೆ ಮತ್ತು ಕಂಪನಿ ವ್ಯವಹಾರಗಳ ಬಗ್ಗೆ ಪ್ರಾಕ್ಟೀಸ್ ಮಾಡಿದ್ದಾರೆ. ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2004ರ ಮಾರ್ಚ್‍ನಲ್ಲಿ ನೇಮಕಗೊಂಡ ಇವರ ಸೇವೆ, 2005ರ ಜೂನ್‍ನಲ್ಲಿ ಕಾಯಂ ಆಯಿತು. 2018ರ ಆಗಸ್ಟ್ 12ರಂದು ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News