ಕರಾವಳಿ, ಮಲೆನಾಡಿನಲ್ಲಿ ಭೂಕುಸಿತ: ರಸ್ತೆ ಮಧ್ಯೆ ಸಿಲುಕಿರುವ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ ಸಂಖ್ಯೆಗಳು

Update: 2018-08-18 13:29 GMT

ಬೆಂಗಳೂರು, ಆ. 18: ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಮುಂದುವರೆದ ಭಾರಿ ಮಳೆ ಮತ್ತು ಗುಡ್ಡ ಕುಸಿತದ ಕಾರಣಗಳಿಂದ ರಸ್ತೆ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಇತರೆ ಸ್ಥಳಗಳಿಂದ ಈ ಪ್ರದೇಶಗಳಿಗೆ ಮತ್ತು ಈ ಪ್ರದೇಶಗಳಿಂದ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಸಾರಿಗೆ ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಕೇರಳದ ತ್ರಿಶೂರ್‌ನಲ್ಲಿ 150ಕ್ಕೂ ಹೆಚ್ಚು ಜನ ಬೆಂಗಳೂರಿಗೆ ಬರುವವರು ಮಳೆಯಲ್ಲಿ ಸಿಲುಕಿದ್ದು, ಕೆಎಸ್ಸಾರ್ಟಿಸಿ ಈಗಾಗಲೇ 3 ಐರಾವತ ಕ್ಲಬ್‌ಕ್ಲಾಸ್ ಬಸ್ಸುಗಳನ್ನು ಪಾಲ್ಗಾಟ್‌ಗೆ ನಿಯೋಜಿಸಿದ್ದು, ಅವರನ್ನು ಉಚಿತವಾಗಿ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ.

ನಿಗಮದ ದೈನಂದಿನ ಸಾರಿಗೆಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಲಗೇಜು ಶುಲ್ಕವಿಲ್ಲದೆ ಉಚಿತವಾಗಿ ಸಾಗಿಸಲು ಅನುಮತಿಸಲಾಗಿದೆ. ಬಸ್ ಘಟಕಗಳಿಂದ ಪರಿಹಾರ ಸ್ಥಳಕ್ಕೆ ಬಸ್ ವ್ಯವಸ್ಥೆ ‘ತುರ್ತು ಸ್ಪಂದನ ದಳ’ ಕಾರ್ಯನಿರ್ವಹಿಸಲಿವೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮುಂದುವರೆದ ಭಾರಿ ಮಳೆ ಮತ್ತು ಗುಡ್ಡ ಕುಸಿತದ ಕಾರಣಗಳಿಂದ ರಸ್ತೆಗಳ ಮಧ್ಯೆ ಸಿಲುಕಿರುವ ಪ್ರಯಾಣಿಕರ ಅನುಕೂಲಕ್ಕಾಗಿ, ನಿಗಮದ ಕೆಳಕಂಡ ಘಟಕಗಳಿಂದ ತುರ್ತು ಕಾರ್ಯಗಳಿಗಾಗಿ ಪ್ರತಿ ಘಟಕದಿಂದ ಎರಡು ವಾಹನ, ಇಬ್ಬರು ಚಾಲಕರು ಮತ್ತು ಇಬ್ಬರು ನಿರ್ವಾಹಕರನ್ನು ಸಜ್ಜುಗೊಳಿಸಿ ಪರಿಹಾರ ಕಾರ್ಯಕ್ಕಾಗಿ ಕಾಯ್ದಿರಿಸಲಾಗಿದೆ.

ದೂರವಾಣಿ: ಮಂಗಳೂರು-1-77609 90713, ಮಂಗಳೂರು-3-77609 90723, ಉಡುಪಿ-77609 95407, ಕುಂದಾಪುರ-77609 90717, ಪುತ್ತೂರು - 77609 90715, ಬಿ.ಸಿ.ರೋಡ್-77609 90718, ಧರ್ಮಸ್ಥಳ- 77609 90716, ಸುಳ್ಯ-76250 95356, ಮಡಿಕೇರಿ-77609 90817, ಚಿಕ್ಕಮಗಳೂರು- 77609 90413, ಸಕಲೇಶಪುರ-77609 90414, ಮೂಡಿಗೆರೆ- 77609 90417, ಹಾಸನ-1 77609 90513.

ರಾಮನಾಥಪುರ- 77609 90515, ಹುಣಸೂರು -77609 90816, ಪಿರಿಯಾಪಟ್ಟಣ-72592 64071, ನಂಜನಗೂಡು-77609 90315, ಗುಂಡ್ಲುಪೇಟೆ-77609 90314, ಶಿವಮೊಗ್ಗ-77609 90464, ಹೊನ್ನಾಳ್ಳಿ-70220 12104, ಸಾಗರ-77609 90467.

ಪರಿಹಾರ ಕಾರ್ಯಕ್ಕೆ ಬಸ್ ವ್ಯವಸ್ಥೆ: ಪರಿಹಾರ ಕಾರ್ಯಗಳಿಗಾಗಿ ಮತ್ತು ಪರಿಹಾರದ ಲಗೇಜು ಸಾಗಾಣಿಕೆ ಮಾಡಲು ಸಂಬಂಧಿಸಿದ ಜಿಲ್ಲಾಡಳಿತದ ಸಹಯೋಗದೊಂದಿಗೆ ಬಸ್ ವ್ಯವಸ್ಥೆ, ಯಾವುದೇ ಪ್ರಯಾಣ ದರ ಹೆಚ್ಚಳ ಮಾಡದೆ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.

ಮುಂಗಡ ಟಿಕೆಟ್ ಕಾಯ್ದಿರಿಸಿದ ಹಾಗೂ ಅತಿ ಅವಶ್ಯ ಕೆಲಸ/ತುರ್ತು ಕೆಲಸಗಳಿಗಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಂದ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.

ನಿಯಂತ್ರಣ ಕೊಠಡಿ: ಸಾರಿಗೆಗಳ ಕಾರ್ಯಚರಣೆಯಲ್ಲಿನ ಅಡತಡೆಗಳ ಮತ್ತು ವ್ಯತ್ಯಾಸಗಳ ಬಗ್ಗೆ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರವಾಗುವ ಮಾಹಿತಿ ಪಡೆದು ಸಾರ್ವಜನಿಕ ಪ್ರಯಾಣಿಕರಿಗೆ ತಿಳಿಸಲು ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿ ದಿನದ 24 ಗಂಟೆಗಳು(24-7) ಕಾರ್ಯ ನಿರ್ವಹಿಸುತ್ತಿದೆ. ಸದರಿ ನಿಯಂತ್ರಣ ಕೊಠಡಿಯ ದೂ.ಸಂಖ್ಯೆಗಳು-77609 90100, 77609 90560ಅನ್ನು ಸಂಪರ್ಕಿಸಲು ಕೋರಲಾಗಿದೆ.

ಪರಿಹಾರ ಕಾರ್ಯದ ತಂಡ ರಚನೆ: ಭಾರಿ ಮಳೆ ಮತ್ತು ಗುಡ್ಡ ಕುಸಿತದ ಕಾರಣಗಳಿಂದ ರಸ್ತೆಗಳ ಮಧ್ಯೆ ಸಿಲುಕಿರುವ ಪ್ರಯಾಣಿಕರ ಪರಿಹಾರ ಕೆಲಸಗಳ ಅನುಕೂಲಕ್ಕಾಗಿ ಕೆಳಕಂಡ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News