ನ್ಯಾಷನಲ್ ಎನ್.ಸಿ.ಸಿ ರೈಫಲ್ ಶೂಟಿಂಗ್ ಸ್ಪರ್ಧೆ: ತುಮಕೂರಿನ ಕಿರಣ್‍ ನಂದನ್‍ಗೆ ಕಂಚಿನ ಪದಕ

Update: 2018-08-18 18:55 GMT

ತುಮಕೂರು.ಆ.18: ನಗರದ ಸರ್ವೋದಯ ಪಿಯು ಕಾಲೇಜಿನ ಎನ್.ಸಿ.ಸಿ ವಿಭಾಗದ ಸಾರ್ಜೆಂಟ್ ಕಿರಣ್ ನಂದನ್ ಎಸ್. ಅವರು ಪಂಜಾಬ್‍ನ ಚಂಡಿಘಡದಲ್ಲಿ ನಡೆದ ಅಖಿಲ ಭಾರತ ಎನ್.ಸಿ.ಸಿ ಅಂತರ ನಿರ್ದೇಶನಾಲಯಗಳ ರೈಫಲ್ ಶೂಟಿಂಗ್ ಸ್ಪರ್ಧೆಯ 50 ಮೀಟರ್ 0.22 ಎ.ಎಂ.ರೈಫಲ್ ಶೂಟಿಂಗ್ ನಲ್ಲಿ ಒಟ್ಟು 546 ಅಂಕಗಳನ್ನು ಪಡೆಯುವ ಮೂಲಕ ಕಂಚಿನ ಪದಕ ಪಡೆದು, ಮುಂದಿನ ತಿಂಗಳು ನಡೆಯುವ ಜಿ.ಪಿ.ಮಾಳವಾಂಕರ್ ರಾಷ್ಟ್ರೀಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಹತೆ ಪಡೆದಿದ್ದಾರೆ.

ಪ್ರತಿಷ್ಠಿತ ಜಿ.ವಿ.ಮಾಳವಾಂಕರ್ ಶೂಟಿಂಗ್ ಸ್ಪರ್ಧೆಗೆ ಭಾಗವಹಿಸಲು ಅರ್ಹತೆ ಪಡೆದಿರುವ ಜಿಲ್ಲೆಯ ಮೊದಲು ಮಹಿಳಾ ಎನ್.ಸಿ.ಸಿ.ಕೆಡೆಟ್ ಇವರಾಗಿದ್ದು, ಭಾರತದ ವಿವಿಧ ರಾಜ್ಯಗಳಿಂದ ಒಟ್ಟು 17 ಜನರು ಭಾಗವಹಿಸಿದ್ದು, 546 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದು, ಕಂಚಿನ ಪದಕ ಪಡೆದಿದ್ದಾರೆ. ಇವರ ಸಾಧನೆಯನ್ನು 4ನೇ ಕರ್ನಾಟಕ ಎನ್.ಸಿ.ಸಿ ಬೆಟಾಲಿಯನ್‍ನ ಕರ್ನಲ್ ಯೋಗೇಂದ್ರ ಸಿಂಗ್ ಪರ್ಮಾರ್, ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ್, ಪ್ರಾಂಶುಪಾಲರಾದ ಎಸ್.ಕೃಷ್ಣನ್ ಹಾಗೂ ಕಾಲೇಜಿನ ಎನ್.ಸಿ.ಸಿ ಅಫೀಸರ್ ಪ್ರದೀಪ್ ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News