ಕೊಡಗಿನಲ್ಲಿ ಮುಖ್ಯಮಂತ್ರಿ ಇಂದು ಮತ್ತೆ ವೈಮಾನಿಕ ಸಮೀಕ್ಷೆ

Update: 2018-08-19 04:20 GMT

ಮಡಿಕೇರಿ, ಆ.19: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಕೊಡಗು ಜಿಲ್ಲೆಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸುವರು.
ಬೆಳಗ್ಗೆ 10 ಗಂಟೆಗೆ ಮೈಸೂರಿನಿಂದ  ಹೊರಡುವ ಸಿಎಂ ಕೊಡಗು ಜಿಲ್ಲೆಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸುವರು. ಶನಿವಾರದಂದು ವೈಮಾನಿಕ ಸಮೀಕ್ಷೆ ನಡೆಸಿದ ಅವರು ಅಂದು ವೀಕ್ಷಿಸದ ಸ್ಥಳಗಳಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸುವರು. ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ, ಪಿರಿಯಾಪಟ್ಟಣ ಹೆಲಿಪ್ಯಾಡಿನಲ್ಲಿ ಇಳಿದು ಕೊಡಗು ಜಿಲ್ಲೆಯ ಪರಿಹಾರ ಕಾಮಗಾರಿಗಳ ಪುನರ್ ಪರಿಶೀಲನೆ ನಡೆಸುವರು.

ಇಂದು ಬೆಳಗ್ಗೆ ಮೈಸೂರಿನಲ್ಲಿ ಮೊಕ್ಕ ಮಾಡಿರುವ ಅವರು ಕೊಡಗು ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು. ಶನಿವಾರ 317 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ರವಿವಾರ ಮಕ್ಕಂದೂರು ಸುತ್ತಮುತ್ತಲ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಸೇನಾ ಪಡೆ ಹಾಗೂ ಎನ್.ಡಿ.ಆರ್.ಎಫ್. ತಂಡ ಕಾರ್ಯೋನ್ಮುಖವಾಗಿವೆ.

 31 ಗಂಜಿ ಕೇಂದ್ರಗಳಿಗೆ ಅಗತ್ಯವಾದ ಆಹಾರ ವ್ಯವಸ್ಥೆಯನ್ನು ಲ್ಪಿಸಲಾಗಿದೆ. ಹಾಲು ಉತ್ಪಾದರ ಸಂಘಳ ಒೂ್ಕಟದಿಂದ ಹಾಲು, ಅಕ್ಕಿ, ಬೇಳೆ ಇತರೆ ಧಾನ್ಯಳನ್ನು ಪೂರೈಸಲಾಗಿದೆ. ಲೋೋಪಯೋಗಿ ಸಚಿವ ಎ್.ಡಿ.ರೇವಣ್ಣ ಸ್ಥಳೆ್ಕ ಆಮಿಸಿ, ಪರಿಹಾರ ್ರಮಳ ಪರಿಶೀಲನೆ ನೆಸಿದ್ದಾರೆ ಎಂದು ೊು ಜಿಲ್ಲಾಧಿಾರಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News