ದೇಶಕ್ಕಾಗಿ ರಾಜೀವ್ ಗಾಂಧಿ ಸಲ್ಲಿಸಿದ ಕೊಡುಗೆ, ಶ್ರಮವನ್ನು ನಾವು ನೆನೆಯುತ್ತೇವೆ: ಪ್ರಧಾನಿ ಮೋದಿ

Update: 2018-08-20 15:37 GMT

ಹೊಸದಿಲ್ಲಿ, ಆ. 20: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನವಾಗಿರುವ ಇಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ನಡಿನಮನ ಸಲ್ಲಿಸಿದ್ದಾರೆ.

‘‘ನಮ್ಮ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿಯವರಿಗೆ ಅವರ ಜನ್ಮದಿನಾಚರಣೆಯ ಸಂದರ್ಭ ನಮ್ಮ ನಮನಗಳು. ದೇಶಕ್ಕಾಗಿ ಅವರ ಶ್ರಮವನ್ನು ನಾವು ನೆನೆಯುತ್ತೇವೆ,’’ ಎಂದು ಪ್ರಧಾನಿ ಟ್ವೀಟ್ ತಿಳಿಸಿದೆ.

ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ 1944ರಲ್ಲಿ ಜನಿಸಿದ್ದು, 1984ರಿಂದ 1989ರ ತನಕ ಪ್ರಧಾನಿ ಹುದ್ದೆಯಲ್ಲಿದ್ದರು. ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಮೇ 21, 1991ರಂದು ಅವರು ಬಲಿಯಾಗಿದ್ದರು.

ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ವಾಧ್ರ ಕೂಡ ರಾಜೀವ್ ಸಮಾಧಿ ಸ್ಥಳ ವೀರ್ ಭೂಮಿಗೆ ತೆರಳಿ ಅವರಿಗೆ ನಮನ ಸಲ್ಲಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಗುಲಾಂ ನಬಿ ಆಝಾದ್, ಅಶೋಕ್ ಗೆಹ್ಲೋಟ್ ಸಹಿತ ಹಲವು ಕಾಂಗ್ರೆಸ್ ನಾಯಕರು ಕೂಡ ಮಾಜಿ ಪ್ರಧಾನಿಯ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದರು.

ನಂತರ ಟ್ವೀಟ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ತಂದೆಯ ಬಗ್ಗೆ ಬರೆಯುತ್ತಾ ‘‘ರಾಜೀವ್ ಗಾಂಧಿ ಅವರೊಬ್ಬ ದಯಾಳು, ಸಹೃದಯಿ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ಸಾವು ನನ್ನ ಜೀವನದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ನಾವು ಜತೆಯಾಗಿ ಕಳೆದ ಕ್ಷಣಗಳು ಹಾಗೂ ಆಚರಿಸಿದ ಹುಟ್ಟು ಹಬ್ಬಗಳು ಸದಾ ಸ್ಮರಣೀಯ,’’ ಎಂದಿದ್ದಾರೆ.

ರಾಹುಲ್ ಗಾಂಧಿ ಕೂಡಾ ತಮ್ಮ ತಂದೆಯನ್ನು ನೆನಪಿಸಿಕೊಂಡಿದ್ದು, ರಾಜೀವ್ ಓರ್ವ ಮೃದು ಮನಸ್ಸಿನ ಪ್ರೀತಿ ತುಂಬಿರುವ ವ್ಯಕ್ತಿಯಾಗಿದ್ದರು. ವರು ನಮ್ಮಿಂದಿಗಿದ್ದ ಮತ್ತು ನಾವು ಜೊತೆಯಾಗಿ ಆಚರಿಸಿದ ಹುಟ್ಟುಹಬ್ಬಗಳ ನೆನಪು ನನಗೆ ಈಗಲೂ ಇದೆ. ಅವರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಅವರ ನೆನಪು ಮಾತ್ರ ಸದಾ ಜೀವಂತವಿರುತ್ತದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. 1944ರ ಆಗಸ್ಟ್ 20ರಂದು ಜನಿಸಿದ ರಾಜೀವ್ ಗಾಂಧಿ 1984ರಿಂದ 1989ರ ವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅವರನ್ನು 1991ರ ಮೇ 21ರಂದು ಚೆನ್ನೈ ಶ್ರೀಪೆರಂಬದೂರ್‌ನಲ್ಲಿ ಆತ್ಮಹತ್ಯಾ ಸ್ಫೋಟ ನಡೆಸಿ ಹತ್ಯೆ ಮಾಡಲಾಗಿತ್ತು. ಅವರ ಜನ್ಮದಿನಾಚರಣೆಯನ್ನು ಸದ್ಭಾವನಾ ದಿವಸ ಎಂದು ಆಚರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News