ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತದ ತೈಲ ಬಿಲ್ 790 ಕೋಟಿ ಡಾಲರ್ ಕಡಿತ

Update: 2024-05-01 03:57 GMT

Photo: PTI

ಹೊಸದಿಲ್ಲಿ: ಕಳೆದ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದ 11 ತಿಂಗಳಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಂಡ ಕಾರಣದಿಂದಾಗಿ ಭಾರತಕ್ಕೆ ಸುಮಾರು 790 ಕೋಟಿ ಡಾಲರ್ ತೈಲ ಆಮದು ಬಿಲ್ ಉಳಿತಾಯವಾಗಿದೆ. 2022-23ರಲ್ಲಿ ರಷ್ಯಾ ತೈಲದಿಂದಾಗಿ 510 ಶತಕೋಟಿ ಡಾಲರ್ ಉಳಿತಾಯವಾಗಿತ್ತು. ದೊಡ್ಡ ಪ್ರಮಾಣದ ರಿಯಾಯ್ತಿದರದಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತಕ್ಕೆ ಸರಬರಾಜು ಮಾಡಿತ್ತು ಎಂಬ ಅಂಶ ಐಸಿಆರ್ ಎ ಸಂಶೋಧನೆಯಿಂದ ತಿಳಿದು ಬಂದಿದೆ.

ಈ ಉಳಿತಾಯದಿಂದಾಗಿ ಭಾರತದ ಚಾಲ್ತಿ ಖಾತೆಯ ಜಿಡಿಪಿಗೆ ಹೋಲಿಸಿದರೆ ಕೊರತೆ ಅನುಪಾತ 2023-24ರಲ್ಲಿ 15-22 ಮೂಲ ಪಾಯಿಂಟ್ ಗೆ ಇಳಿದಿದೆ.

ಕನಿಷ್ಟ ಮಟ್ಟದ ರಿಯಾಯ್ತಿ ಉಳಿದರೆ, ಸರಾಸರಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯರಲ್ಗೆ 85 ಡಾಲರ್ ಎಂದು ಅಂದಾಜಿಸಿದರೆ 2024-25ರಲ್ಲಿ ಭಾರತದ ನಿವ್ವಳ ತೈಲ ಆಮದು ಬಿಲ್ 101-104 ಡಾಲರ್ ಗೆ ಹೆಚ್ಚುವ ಸಾಧ್ಯತೆ ಇದ್ದು, 2023-24ರಲ್ಲಿ ಇದು 96 ಶತಕೋಟಿ ಡಾಲರ್ ಆಗಿತ್ತು.

ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳ ಆಧಾರದಲ್ಲಿ, 2023ರ ಏಪ್ರಿಲ್ ನಿಂದ 2024ರ ಫೆಬ್ರವರಿಯ ಅವಧಿಯಲ್ಲಿ ಭಾರತದ ಒಟ್ಟು ತೈಲ ಆಮದಿನ ಶೇಕಡ 36ರಷ್ಟನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. 2021-22ರಲ್ಲಿ ಇದ್ದ ಶೇಕಡ 2ಕ್ಕೆ ಹೋಲಿಸಿದರೆ ಇದು ಶೇಖಡ 1700ರಷ್ಟು ಅಧಿಕ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News