ಶೃಂಗೇರಿ: 'ಕೊಡಗಿನೊಂದಿಗೆ ನಾವು' ಜಾಥಾ ಕಾರ್ಯಕ್ರಮ

Update: 2018-08-20 12:25 GMT

ಶೃಂಗೇರಿ, ಆ.20: ಜೀವನದ ಸಾರ್ಥಕತೆಗೆ ಮಾನವೀಯ ಮೌಲ್ಯಗಳ ಅಗತ್ಯವಿದೆ. ಒಬ್ಬರು ಕಷ್ಟದಲ್ಲಿರುವಾಗ ಅವರಿಗೆ ಸಹಾಯಹಸ್ತ ನೀಡುವುದು ಮಾನವನ ಸಹಜ ಧರ್ಮ. ಕೊಡಗಿನಲ್ಲಿ ಈ ಬಾರಿ ಅತಿಯಾದ ಮಳೆಯಿಂದ ನೊಂದ ಸಂತ್ರಸ್ತರಿಗೆ ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಹಶೀಲ್ದಾರ್ ನಾರಾಯಣ ಕನಕರೆಡ್ಡಿ ತಿಳಿಸಿದ್ದಾರೆ.

ತಾಲೂಕು ಆಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸೋಮವಾರ ಆಯೋಜಿಸಿದ "ಕೊಡಗಿನೊಂದಿಗೆ ನಾವು" ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಹಲವು ಕಡೆ ಮಳೆಯಿಂದ ಹಾನಿ ಉಂಟಾಗಿದೆ. ಅತೀ ಹೆಚ್ಚು ಹಾನಿಗೊಳಗಾದ ಕೊಡಗಿನ ಸಂತ್ರಸ್ಥರಿಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದೇವೆ. ಆಹಾರಧಾನ್ಯಗಳು, ಬಟ್ಟೆಬರೆಗಳ ಜೊತೆಗೆ 2,02,866 ರೂ. ಸಂಗ್ರಹವಾಗಿದೆ. ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದರು.

ಮುಖ್ಯಬೀದಿಯಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ರೋಟರಿ,ಲಯನ್ಸ್, ಜೆಸಿಐ, ಇನ್ನರ್‍ವ್ಹೀಲ್,ವರ್ತಕರ ಸಂಘ,ಸಾಹಿತ್ಯಾಸಕ್ತರವೇದಿಕೆ, ತಾ.ಅಂಗನವಾಡಿ ಕ್ಷೇಮಾಭಿವೃದ್ಧಿ ಸಂಘ, ಎಚ್.ಆರ್.ಎಫ್.ಐ, ಪೋಲಿಸ್ ಇಲಾಖೆ ಮುಂತಾದ ಸಂಸ್ಥೆಗಳೊಂದಿಗೆ ಜಿ.ಪಂ, ತಾ.ಪಂ, ಪ.ಪಂ, ಗ್ರಾ.ಪಂನ ಜನಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News