ಕೊಳ್ಳೇಗಾಲ: ನಿರಾಶ್ರಿತರಿಗೆ ಜಿಲ್ಲಾಡಳಿತದಿಂದ ಆಹಾರ ಸಾಮಾಗ್ರಿಗಳ ವಿತರಣೆ

Update: 2018-08-25 12:00 GMT

ಕೊಳ್ಳೇಗಾಲ,ಆ.25: ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿದ್ದ ನಿರಾಶ್ರಿತ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್‍ನ್ನು ನೀಡಲಾಯಿತು.

ತಾಲೂಕಿನ ದಾಸನಪುರ ಗ್ರಾಮದ 56 ನಿರಾಶ್ರಿತ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್, ಚಾಪೆ, ದಿಂಬುಗಳು ಹಾಗೂ ಹಳೇ ಅಣಗಳ್ಳಿ ಗ್ರಾಮದ 236 ನಿರಾಶ್ರಿತ ಕುಟುಂಬಗಳಿಗೆ ತಲಾ 2 ಕೆ.ಜಿ ಅಕ್ಕಿಯನ್ನು ಜಿಲ್ಲಾಡಳಿತ ವತಿಯಿಂದ ಉಪವಿಭಾಗಾಧಿಕಾರಿ ಪೌಝಿಯಾ ತರುನ್ನಮ್ ಅವರು ನೀಡಿದರು.

ನಂತರ ಮಾತನಾಡಿ ಅವರು, ದಾನಿಗಳು ನೀಡಿದ್ದ ಪಡಿತರಗಳು ತಾಲೂಕು ಆಡಳಿತದಿಂದ ನಿರಾಶ್ರಿತ ಜನರಿಗೆ ನೀಡಿದ್ದೇವೆ. ಹಾನಿಯಾಗಿರುವ ಮನೆಗಳು ಹಾಗೂ ಜಮೀನುಗಳನ್ನು ಸರ್ವೆ ನಡೆಸಿ ನಂತರ ಜಿಲ್ಲಾಡಳಿತದ ವತಿಯಿಂದ ಸೂಕ್ತ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಉಪವಿಭಾಗಾಧಿಕಾರಿ ಗೀತಾ ಹುಡೆದ್, ಪ್ರಭಾರ ತಹಶೀಲ್ದಾರ್ ಚಂದ್ರಮೌಳಿ, ಪ್ರೋ.ತಹಶಿಲ್ದಾರ್ ಸುದರ್ಶನ್, ಗ್ರಾಮಲೆಕ್ಕಿಗರಾದ ರಾಕೇಶ್, ನಟೇಶ್, ತಿನೇಶ್, ಉಪವಿಭಾದ ಕಚೇರಿಯ ಸುರೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News