ಗುಂಡ್ಲುಪೇಟೆ: ಲಾರಿಯ ಟಯರ್ ಸಿಡಿದು ಬೈಕ್ ಹಿಂಬದಿ ಸವಾರೆ ಮೃತ್ಯು

Update: 2018-08-25 12:44 GMT

ಗುಂಡ್ಲುಪೇಟೆ,ಆ.25: ಪಟ್ಟಣದ ಹೊರವಲಯದಲ್ಲಿ ವೇಗವಾಗಿ ಚಲಿಸುತ್ತಿದ್ದ ಲಾರಿಯ ಟಯರ್ ಸಿಡಿದು, ಹಿಂದಿನಿಂದ ಬರುತ್ತಿದ್ದ ಬೈಕಿನ ಹಿಂಬದಿ ಕುಳಿತಿದ್ದ ಮಹಿಳೆ ಸಾವಿಗೀಡಾಗಿರುವ ಘಟನೆ ನಡೆದಿದೆ.

ಊಟಿಯಿಂದ ಪಟ್ಟಣದತ್ತ ಬರುತ್ತಿದ್ದ ಸರಕು ಸಾಗಾಣೆ ಲಾರಿಯ ಟಯರ್ ಸಿಡಿದ ಪರಿಣಾಮ, ಲಾರಿಯ ಹಿಂದಿನಿಂದ ಬರುತ್ತಿದ್ದ ಬೈಕ್ ಹಿಂಬದಿ ಸವಾರೆ ಮಂಜುಳಾ(35) ಸಾವಿಗೀಡಾಗಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ರೇಶ್ಮಾ ಎಂಬುವರಿಗೂ ತೀವ್ರ ಪೆಟ್ಟುಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News