ಏಶ್ಯನ್ ಗೇಮ್ಸ್: ದ್ಯುತಿ, ಹಿಮಾ ಸೆಮಿಫೈನಲ್‌ಗೆ

Update: 2018-08-28 07:02 GMT

ಜಕಾರ್ತ, ಆ.28: ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 200 ಮೀ.ಓಟದ ಸ್ಪರ್ಧೆಯಲ್ಲಿ ಭಾರತದ ಓಟಗಾರ್ತಿಯರಾದ ದ್ಯುತಿ ಚಂದ್ ಹಾಗೂ ಹಿಮಾ ದಾಸ್ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.

ಮಂಗಳವಾರ ನಡೆದ 200 ಮೀ. ಓಟದ ಹೀಟ್ಸ್-4ರಲ್ಲಿ 23.27 ಸೆಕೆಂಡ್‌ನಲ್ಲಿ ಗುರಿ ತಲುಪಿದ ಚಂದ್ ಒಟ್ಟಾರೆ ಎರಡನೇ ಸ್ಥಾನದೊಂದಿಗೆ ಸೆಮಿ ಫೈನಲ್‌ಗೆ ತಲುಪಿದರು.

ಹೀಟ್-1ರಲ್ಲಿ 23.47 ಸೆಕೆಂಡ್‌ನಲ್ಲಿ ಗುರಿ ತಲುಪಿದ ಹಿಮಾ ದಾಸ್ ನಾಲ್ಕನೇ ಸ್ಥಾನದೊಂದಿಗೆ ಅಂತಿಮ-4ರ ಹಂತ ತಲುಪಿದ್ದಾರೆ.

 ಈ ಇಬ್ಬರು ಓಟಗಾರ್ತಿಯರು ಈಗಾಗಲೇ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದು ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ.

200 ಮೀ. ಸೆಮಿ ಫೈನಲ್ ಪಂದ್ಯಗಳು ಇಂದು ಸಂಜೆ 5:20ಕ್ಕೆ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News