ಶಿವಮೊಗ್ಗ: ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸಹೋದರರು

Update: 2018-08-28 16:07 GMT

ಶಿವಮೊಗ್ಗ, ಆ. 28: ಇತ್ತೀಚಿಗೆ ಶಿವಮೊಗ್ಗ ನಗರದಲ್ಲಿ ನಡೆದ ಶಿವಮೊಗ್ಗ ಓಪನ್ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಸಹೋದರರು ಬಂಗಾರದ ಪದಕ ಗೆಲ್ಲುವ ಮೂಲಕ ಸರ್ವರ ಗಮನ ಸೆಳೆದಿದ್ದಾರೆ. 

ನಗರದ ಸೆಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ 6 ನೇ ತರಗತಿಯ ಓದುತ್ತಿರುವ ಸಮರ್ಥ ಆರ್. ಈಸೂರು ಹಾಗು ಅದೇ ಶಾಲೆಯಲ್ಲಿ 2 ನೇ ತರಗತಿಯ ಅಭ್ಯಾಸ ಮಾಡುತ್ತಿರುವ ಆರುಷ್ ಆರ್. ಈಸೂರುರವರೇ ಬಂಗಾರದ ಪದಕ ಸಾಧನೆ ಮಾಡಿದ ಸಹೋದರರಾಗಿದ್ದಾರೆ. 

ಇವರು ಕ್ರಮವಾಗಿ 30-40 ಕೆ.ಜಿ. ಹಾಗು 20-30 ಕೆ.ಜಿ. ವಿಭಾಗದ ಕಾಟ ಹಾಗು ಕುಮಟೆಯಲ್ಲಿ ಬಂಗಾರದ ಪದಕಗಳನ್ನು ಗೆಲ್ಲುವುದರ ಮೂಲಕ ಜಿಲ್ಲೆಗೆ ಹಾಗು ಓದುತ್ತಿರುವ ಶಾಲೆಗೆ ಕೀರ್ತಿ ತಂದಿದ್ದಾರೆ. ಶ್ರೀಮತಿ ಲೀನಾ ಹಾಗು ಡಾ. ರವಿ. ಎಂ ದಂಪತಿ ಪುತ್ರರಾಗಿರುವ ಇವರು, ನಗರದ ಖ್ಯಾತ ಕರಾಟೆ ತರಬೇತುದಾರರಾಗಿರುವ ವಿನೋದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. 

ಶಿವಮೊಗ್ಗ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ನೇಪಾಳ್, ಶ್ರೀಲಂಕಾ, ಮಲೇಷಿಯಾ ದೇಶದ ಕ್ರೀಡಾಪಟುಗಳ ಜೊತೆಗೆ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತೀತರ ರಾಜ್ಯಗಳಿಂದಲೂ ಕ್ರೀಡಾಪಟುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News