ಮಲ್ಲಂದೂರು: ಪಿಎಸ್ಸೈ ವರ್ಗಾವಣೆ ವಿರೋಧಿಸಿ ಮನವಿ

Update: 2018-08-28 17:35 GMT

ಚಿಕ್ಕಮಗಳೂರು, ಆ.28: ಮಲ್ಲಂದೂರು ಪಿಎಸ್ಸೈ ಪ್ರೇಮನಗೌಡ ಪಾಟೀಲ್ ಅವರನ್ನು ವರ್ಗಾವಣೆ ಮಾಡಬಾರದೆಂದು ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಪೋಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಂಜುನಾಥ್ ಮನವಿ ನೀಡಿ ಮಾತನಾಡಿ, ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಸೈ ಆಗಿ ಪ್ರೇಮನಗೌಡಪಾಟೀಲ್ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಕರ್ತವ್ಯಕ್ಕೆ ಹಾಜರಾದ ದಿನದಿಂದ ಮಲ್ಲಂದೂರು ಸುತ್ತಮುತ್ತ ಅಕ್ರಮ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕಿದ್ದಾರೆ. ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಜೂಜಾಟದ ದಂದೆಯನ್ನು ತಡೆಗಟ್ಟಿದ್ದಾರೆ. ಮಲೆನಾಡಿನಲ್ಲಿ ಕಾಫಿ, ಮೆಣಸು ಕಳ್ಳತನ ಹೆಚ್ಚಾಗಿದ್ದು, ಕಳ್ಳತನವನ್ನು ಸಂಪೂರ್ಣವಾಹಿ ತಡೆಗಟ್ಟಿ ಯಾವುದೇ ದೊಂಬಿ, ಗಲಾಟೆ, ದೌರ್ಜನ್ಯಗಳು ಆಗದಂತೆ ಸಾರ್ವಜನಿಕರೊಂದಿಗೆ ಅತ್ಯಂತ ಸ್ನೇಹದಿಂದ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ನಾಂದಿ ಹಾಡಿದ್ದಾರೆ ಎಂದರು.

ಇವರನ್ನು ರಾಜಕೀಯ ದುರುದ್ದೇಶದಿಂದ ಬೇರೆಕಡೆಗೆ ವರ್ಗಾವಣೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಪೊಲೀಸ್ ಅಧೀಕ್ಷಕರು ಈ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದೆಂದು ಅವರು ಈ ವೇಳೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಮಹೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷರಾದ ಶೇಖರ್, ರಘುನಾಥ್, ಮಲ್ಲೇಶ್, ಪೂರ್ಣೇಶ್, ಗ್ರಾಮದ ಮುಖಂಡರಾದ ನಾಗರಾಜ್, ಕೆರೆಮುಕ್ಕಿ ಮಹೇಶ್, ದೇವೆಗೌಡ, ಮಲ್ಲೇಶ್, ರಾಕೇಶ್, ಧರ್ಮೇಶ್, ಪ್ರಶಾಂತ್, ಪ್ರಥಮ್, ಹೀರೇಗೌಡ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News