ಸತತ ನಾಲ್ಕನೇ ದಿನವೂ ಇಂಧನ ಬೆಲೆಯೇರಿಕೆ

Update: 2018-08-29 11:54 GMT

ಹೊಸದಿಲ್ಲಿ, ಆ.29 : ಇಂಧನ ಬೆಲೆಯೇರಿಕೆ ಸತತ ನಾಲ್ಕನೇ ದಿನವಾದ ಬುಧವಾರವೂ ಮುಂದುವರಿದಿದ್ದು ಪೆಟ್ರೋಲ್ ಬೆಲೆ ಮುಂಬೈಯಲ್ಲಿ ಪ್ರತಿ ಲೀಟರ್ ಗೆ 13 ಪೈಸೆಯಷ್ಟು ಏರಿಕೆಯಾಗಿ ರೂ 85.60 ತಲುಪಿದ್ದರೆ  ದಿಲ್ಲಿಯಲ್ಲಿ ಬೆಲೆ ರೂ 78.18ರಷ್ಟಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ ರೂ 81.11ಗೆ ತಲುಪಿದೆ. ಅತ್ತ ಡೀಸೆಲ್ ಬೆಲೆಗಳೂ ದಾಖಲೆ ಏರಿಕೆ ಕಂಡಿದ್ದು ಮುಂಬೈ, ದಿಲ್ಲಿ, ಕೊಲ್ಕತ್ತಾದಲ್ಲಿ ಪ್ರತಿ ಲೀಟರ್ ಗೆ ಕ್ರಮವಾಗಿ ರೂ 74.05, ರೂ 69.75 ಹಾಗೂ ರೂ 72.60 ಆಗಿತ್ತು.

ಇಂಧನ ಬೆಲೆ  ಆಗಸ್ಟ್ ಮಧ್ಯ ಭಾಗದಿಂದ ಏರಿಕೆ ಕಂಡಿದ್ದು ರೂಪಾಯಿ ಮೌಲ್ಯದಲ್ಲಿನ ಏರಿಳಿಕೆಯೇ ಇದಕ್ಕೆ ಕಾರಣವೆನ್ನಲಾಗಿದೆ. 

ಮೆಟ್ರೋ ನಗರಗಳ ಪೈಕಿ ದಿಲ್ಲಿಯಲ್ಲಿ ಇಂಧನ ಬೆಲೆ  ಕಡಿಮೆಯಾಗಿದ್ದರೆ ಮುಂಬೈಯಲ್ಲಿ ಗರಿಷ್ಠವಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಗೆ ಅತ್ಯಧಿಕ ಶೇ 39.12 ವ್ಯಾಟ್ ವಿಧಿಸಲಾಗುತ್ತಿದೆ. ತೆಲಂಗಾಣದಲ್ಲಿ ಡೀಸೆಲ್ ಮೇಲೆ ಗರಿಷ್ಠ ಶೇ 26ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ. ದಿಲ್ಲಿಯಲ್ಲಿ  ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕ್ರಮವಾಗಿ ಶೇ. 27 ಹಾಗೂ ಶೇ 17.24ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News