ಏಶ್ಯನ್ ಗೇಮ್ಸ್ 2018: 1500 ಮೀ. ಓಟದಲ್ಲಿ ಜಾನ್ಸನ್‌ಗೆ ಚಿನ್ನ

Update: 2018-08-30 13:21 GMT

ಜಕಾರ್ತ, ಆ.30: ಭಾರತದ ಓಟಗಾರ ಜಿನ್ಸನ್ ಜಾನ್ಸನ್ ಏಶ್ಯನ್ ಗೇಮ್ಸ್‌ನ 12ನೇ ದಿನವಾದ ಗುರುವಾರ ಪುರುಷರ 1500 ಮೀ. ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡರು.

ಇಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಜಾನ್ಸನ್ 3 ನಿಮಿಷ 44.72 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಈ ಮೂಲಕ ಗೇಮ್ಸ್‌ನಲ್ಲಿ ಎರಡನೇ ಪದಕ ತನ್ನದಾಗಿಸಿಕೊಂಡರು.

 ಜಾನ್ಸನ್ ಪುರುಷರ 800 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಜಾನ್ಸನ್ ಭಾರತದ ಪದಕದ ಖಾತೆಗೆ 12ನೇ ಚಿನ್ನದ ಪದಕ ಜಮೆ ಮಾಡಿದರು.

ಸೀಮಾ ಪೂನಿಯಾ ಹಾಗೂ ಪಿಯು ಚಿತ್ರಾ ಏಶ್ಯನ್ ಗೇಮ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ ಡಿಸ್ಕಸ್ ಎಸೆತ ಹಾಗೂ 1500 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಸೀಮಾ ತನ್ನ ಮೂರನೇ ಪ್ರಯತ್ನದಲ್ಲಿ 62.26 ಮೀ. ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಕಂಚು ಜಯಿಸಿದರು.

 ಚಿತ್ರಾ 1500 ಮೀ. ಓಟದಲ್ಲಿ 4 ನಿಮಿಷ 12.56 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News