ಕೇರಳಕ್ಕೆ ಸಹಾಯಹಸ್ತ ಚಾಚಿದ ಏಶಿಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ಸೀಮಾ ಪುನಿಯಾ

Update: 2018-08-31 09:03 GMT

ಜಕಾರ್ತ, ಆ. 31: ಮಹಿಳೆಯರ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ಕಂಚು ಗೆದ್ದ ಹರ್ಯಾಣಾದ ಸೀಮಾ ಪುನಿಯಾ ತಾವು 1 ಲಕ್ಷ ರೂ. ಹಾಗೂ ತಮ್ಮ ಜಕಾರ್ತ ಪ್ರವಾಸದ ಪಾಕೆಟ್ ಮನಿಯನ್ನು  (ಸುಮಾರು 700 ಡಾಲರ್ ಅಂದರೆ ಅಂದಾಜು 49,000 ರೂ.) ಕೇರಳ ನೆರೆ ಸಂತ್ರಸ್ತರ ಪರಿಹಾರಕ್ಕೆ ನೀಡುವುದಾಗಿ ತಿಳಿಸಿ ಎಲ್ಲರಿಗೂ ಆದರ್ಶರಾಗಿದ್ದಾರೆ.

ತಾವು ಕೇರಳಕ್ಕೆ ತೆರಳಿ ಅಲ್ಲಿ ಸ್ವಲ್ಪ ಸಮಯದ ಕಾಲ ಕಷ್ಟದಲ್ಲಿರುವ ಜನರಿಗೆ ನೆರವಾಗುವುದಾಗಿಯೂ ಸೀಮಾ ತಿಳಿಸಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ಭಾರತೀಯ ತಂಡದ ಇತರ ಸದಸ್ಯರಿಗೂ ಇದೇ ರೀತಿ ಕೇರಳಕ್ಕೆ ಸಹಾಯ ಮಾಡುವಂತೆ ಅವರು ಕೋರಿದ್ದಾರೆ. ಕನಿಷ್ಠ ತಮ್ಮ ಅರ್ಧದಷ್ಟು ಪಾಕೆಟ್ ಮನಿಯನ್ನು ಕೇರಳ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡುವಂತೆ ಅವರು ತಮ್ಮ ಸಹ ಕ್ರೀಡಾಳುಗಳಿಗೆ ವಿನಂತಿಸಿದ್ದಾರೆ.

ಮೂವತ್ತೈದು ವರ್ಷದ ಸೀಮಾ, ತಾವು ಭಾರತಕ್ಕೆ ಮರಳಿದ ನಂತರ ಕೇರಳಕ್ಕೆ ಭೇಟಿ ನೀಡುವುದಾಗಿ ಹಾಗೂ ನಂತರ ತನ್ನ ಬಲ ಪಾದದಲ್ಲಿರುವ ಮೂಳೆ ಸಮಸ್ಯೆಗೆ ಶಸ್ತ್ರಕ್ರಿಯೆಗೆ ಒಳಗಾಗುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News