ಹನೂರು: ಉಚಿತ ಕಣ್ಣು ತಪಾಸಣಾ ಶಿಬಿರ

Update: 2018-08-31 12:01 GMT

ಹನೂರು,ಆ.31: ಕಣ್ಣಿನ ಆರೋಗ್ಯ ತಪಾಸಣೆ ನಿಯಮಿತವಾಗಿ ಮಾಡಿಸುವಂತೆ ಗುಡ್ ಶೆಪರ್ಡ್ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಎಲ್ಸಿ ಹೇಳಿದರು.

ಅರವಿಂದ ಕಣ್ಣಾಸ್ಪತ್ರೆ ಕೊಯಮ್ಮತ್ತೂರು, ಲಯನ್ಸ್ ಮಿಡ್ ಟೌನ್, ಈರೋಡ್ ಸಹಯೋಗದೊಂದಿಗೆ ಹೂಗ್ಯಂ ಪಂಚಾಯತ್ ನ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕಣ್ಣಿನ ಪೊರೆ, ಗ್ಲಾಕೋಮ, ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ಹತ್ತಿ ಮತ್ತು ದೂರ ದೃಷ್ಟಿ ದೋಷ, ವಾರೆ ಕಣ್ಣು, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ರಾತ್ರಿ ಕುರುಡುತನಕ್ಕೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ತಪಾಸಣೆ ಸಿಬಿರದಲ್ಲಿ 235 ಜನರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕೂಡ್ಲೂರು ಗ್ರಾ.ಪಂ. ಅದ್ಯಕ್ಷ ರಾಜೇಶ್ವರಿ, ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಶ್, ಅರವಿಂದ ಕಣ್ಣಾಸ್ಪತ್ರೆ ವೈದ್ಯಾಧಿಕಾರಿ ಡಾ.ಸೈಯದ್, ಶಿಬಿರದ ಆಯೋಜಕ ವಿಜಯಕಾಂತ್, ಗುಡ್ ಶೆಪರ್ಡ್ ಸಂಸ್ಥೆಯ ಸಿಬ್ಬಂದಿ ಸತೀಶ್ ಮತ್ತು ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News