ಆರೆಸ್ಸೆಸ್‍ ಜೊತೆ ಯಾವುದೇ ಸಂಬಂಧವಿಲ್ಲ; ಆರೋಪ ನಿರಾಕರಿಸಿದ ಪ್ರಣವ್ ಮುಖರ್ಜಿ

Update: 2018-09-01 08:55 GMT

ಹೊಸದಿಲ್ಲಿ, ಸೆ.1: ಪ್ರಣವ್‍ ಮುಖರ್ಜಿ ಫೌಂಡೇಶನ್ (ಪಿಎಂಎಫ್) ಆರೆಸ್ಸೆಸ್‍ ನ ಹರ್ಯಾಣ ಘಟಕದೊಂದಿಗೆ ಸಂಬಂಧವನ್ನು ಹೊಂದಿದೆ ಎಂಬ ಆರೋಪವನ್ನು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಿರಾಕರಿಸಿದ್ದಾರೆ. ಆರೆಸ್ಸೆಸ್‍ ನೊಂದಿಗೆ ಫೌಂಡೇಶನ್ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ಪ್ರಣವ್‍ ಮುಖರ್ಜಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

2016 ಜುಲೈಯಲ್ಲಿ ಹರ್ಯಾಣ ಸರಕಾರ ಆರಂಭಿಸಿದ ಸ್ಮಾರ್ಟ್‍ಗ್ರಾಮ ಯೋಜನೆ ಪ್ರದೇಶಕ್ಕೆ ಪ್ರಣವ್ ಮುಖರ್ಜಿ ಭೇಟಿ ನೀಡಿದ್ದರು. ರಾಷ್ಟ್ರಪತಿಯಾಗಿದ್ದ ವೇಳೆ  ಈ ಯೋಜನೆಯಡಿಯಲ್ಲಿ ಕೆಲವು ಗ್ರಾಮಗಳನ್ನು ಪ್ರಣವ್ ಮುಖರ್ಜಿ ದತ್ತು ಸ್ವೀಕರಿಸಿದ್ದರು. ಗುರ್‍ಗಾಂವ್‍ನ ಈ ಗ್ರಾಮಕ್ಕೆ ಸೆಪ್ಟಂಬರ್ ಎರಡರಂದು ಭೇಟಿ ನೀಡಲು ರಾಜ್ಯ ಸರಕಾರ ಅವರಿಗೆ ಆಹ್ವಾನ ನೀಡಿದೆ. ಮಾಜಿ ರಾಷ್ಟ್ರಪತಿ ಕಚೇರಿಯು ಈ ಯೋಜನೆಯನ್ನು ಪ್ರಣವ್ ಮುಖರ್ಜಿ ಉದ್ಘಾಟಿಸಲಿದ್ದಾರೆ ಎಂದು ತನ್ನ ಅಧಿಕೃತ ಟ್ವಿಟರ್‍ನಲ್ಲಿ  ತಿಳಿಸಿದೆ.

ಆರೆಸ್ಸೆಸ್ ತನ್ನ ನಾಗಪುರದಲ್ಲಿನ ಕೇಂದ್ರ ಕಚೇರಿಯಲ್ಲಿ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಪ್ರಣವ್‍ ಮುಖರ್ಜಿ ಭಾಗವಹಿಸಿದ್ದರು.  ಅವರಿಗೆ ಆರೆಸ್ಸೆಸ್ ಆಮಂತ್ರಣ ನೀಡಿದ್ದು, ಆಮಂತ್ರಣವನ್ನು ಸ್ವೀಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News