ಮತದಾರರಲ್ಲದಿದ್ದರೂ ಮತಗಟ್ಟೆ ಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹಗೆ ಘೇರಾವ್

Update: 2018-09-01 10:32 GMT

ಮೈಸೂರು, ಸೆ.1: ನಿನ್ನೆ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ವೇಳೆ ಮತದಾರರಾಗಿಲ್ಲದಿದ್ದರೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತಗಟ್ಟೆಗೆ ಹೋಗಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಘೇರಾವ್ ಹಾಕಿದ ಘಟನೆ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ.

ಮೈಸೂರಿನ ಕೆ.ಎನ್.ಪುರದ ವಾರ್ಡ್ ನಂ.31ರ ಶ್ರೀಕಂಠೇಶ್ವರ ಶಾಲೆಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಸಂಸದ ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿ ಪದ್ಮನಾಭ ಜೊತೆ ಮತಗಟ್ಟೆ ಕೇಂದ್ರಕ್ಕೆ ಪ್ರವೇಶಿಸಿದ್ದರು. ಆದರೆ ಅವರು ಅಲ್ಲಿಯ ಮತದಾರರಾಗಿರಲಿಲ್ಲ. ಇದನ್ನು ಆಕ್ಷೇಪಿಸಿದ ಸ್ಥಳೀಯರು, ಮತಗಟ್ಟೆ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಾಪ್ ಸಿಂಹರಿಗೆ ಘೇರಾವ್ ಹಾಕಿ ತರಾಟೆ ತೆಗೆದುಕೊಂಡರು. ಅಲ್ಲದೆ ಮತದಾರರಲ್ಲದವರು ಮತಗಟ್ಟೆಗೆ ಹೋಗಬಾರದೆಂದು ಗಲಾಟೆ ಮಾಡಿದರು. ಈ ವೇಳೆ ‘‘ನಾನು ಜನಪ್ರತಿನಿಧಿ ವೋಟಿಂಗ್ ಬಗ್ಗೆ ಪರಿಶೀಲಿಸಲು ಬಂದಿದ್ದೇನೆ’’ ಎಂದು ಸಂಸದರು ಸಮಾಜಾಯಿಷಿ ನೀಡಿದರೂ ಸ್ಥಳೀಯರ ಅಸಮಾಧಾನ ಮಾತ್ರ ನಿಲ್ಲಲಿಲ್ಲ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಮತದಾರರಲ್ಲದವರನ್ನು ಕಳುಹಿಸಿದರು. ಕ್ಯಾತಮಾರನಹಳ್ಳಿ ವಾರ್ಡ್‌ಗೆ ಭೇಟಿ ನೀಡಿ ಬಳಿಕ ಮತ್ತೊಂದು ವಾರ್ಡ್‌ಗೆ ಸಂಸದ ಪ್ರತಾಪ್ ಸಿಂಹ ಭೇಟಿ ಕೊಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News