ಮೆಡಿಕಲ್ ಸೀಟು ಕೊಡಿಸುವುದಾಗಿ ಹಣ ಪಡೆದರೆ ಕಾನೂನು ಕ್ರಮ: ಡಾ.ಜಿ.ಪರಮೇಶ್ವರ್ ಎಚ್ಚರಿಕೆ

Update: 2018-09-01 10:33 GMT

ತುಮಕೂರು, ಸೆ.1: ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿದೆ. ದಿಲ್ಲಿಯಿಂದಲೇ ಸೀಟು ಹಂಚಿಕೆಯಾಗಲಿದೆ. ಹೀಗಾಗಿ ಇದರಲ್ಲಿ ಯಾವುದೇ ಶಾರ್ಟ್‌ಕಟ್‌ಗೆ ಅವಕಾಶ ಇಲ್ಲ. ಒಂದು ವೇಳೆ ಯಾರಾದರು ಈ ವಿಚಾರವಾಗಿ ವಿದ್ಯಾರ್ಥಿಗಳ ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ಅಂಥವರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯಾರ್ಥಿಗಳು ನೀಟ್‌ಪರೀಕ್ಷೆ ಬರೆದೇ ಸೀಟು ಪಡೆಯುವ ಪದ್ಧತಿ ಇದೆ. ಇದರಲ್ಲಿ ಯಾವ ಅಡ್ಡದಾರಿಗೆ ಅವಕಾಶವಿಲ್ಲ. ಹಣ ಪಡೆದು ಸೀಟು ಹಂಚಿಕೆ ಮಾಡುವುದು ಅಸಾಧ್ಯ. ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ದೂರು ನೀಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News