ನಗರ ಸಭೆ ಚುನಾವಣೆ: ಚಾ.ನಗರ ಶೇ 72.03, ಕೊಳ್ಳೇಗಾಲ ಶೇ.73.71ರಷ್ಟು ಮತದಾನ

Update: 2018-09-01 11:52 GMT

ಚಾಮರಾಜನಗರ, ಸೆ.1: ಜಿಲ್ಲೆಯ ಚಾಮರಾಜನಗರ ನಗರ ಸಭೆ ಚುನಾವಣೆಗೆ ಶೇ.72.03ರಷ್ಟು ಮತದಾನವಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಶೇ.73.71 ರಷ್ಟು ಮತದಾನವಾಗಿದೆ.

ಚಾಮರಾಜನಗರ ನಗರ ಸಭೆಯ ವ್ಯಾಪ್ತಿಯಲ್ಲಿ 26066 ಪುರುಷರು, 27641 ಮಹಿಳೆಯರು,ಇತರೆ 7 ಮಂದಿ ಸೇರಿದಂತೆ ಒಟ್ಟು 53714 ಮತದಾರರು ಇದ್ದಾರೆ. ಈ ಪೈಕಿ 19156 ಪುರುಷರು 19536 ಮಹಿಳೆಯರು ಸೇರಿದಂತೆ ಒಟ್ಟಾರೆ 38692 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.73.49 ರಷ್ಟು ಪುರುಷರು, ಶೇ70.68ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ. 

ಕೊಳ್ಳೇಗಾಲ ನಗರ ಸಭೆಯ ವ್ಯಾಪ್ತಿಯಲ್ಲಿ 20676 ಪುರುಷರು, 21212 ಮಹಿಳೆಯರು, ಇತರೆ 4 ಮಂದಿ ಸೇರಿದಂತೆ ಒಟ್ಟು 41892 ಮತದಾರರು ಇದ್ದಾರೆ. ಈ ಪೈಕಿ 15461 ಪುರುಷರು 15416 ಮಹಿಳೆಯರು ಸೇರಿದಂತೆ ಒಟ್ಟಾರೆ 30877 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಶೇ.74.78 ರಷ್ಟು ಪುರುಷರು, ಶೇ72.68ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News