ಪಾಕ್ ಗೆ ನೀಡುತ್ತಿದ್ದ ಆರ್ಥಿಕ ನೆರವಿಗೆ ಅಮೆರಿಕದ ಕತ್ತರಿ

Update: 2018-09-02 05:45 GMT

ವಾಶಿಂಗ್ಟನ್ , ಸೆ.2: ಭಯೋತ್ಪಾದಕರ  ವಿರುದ್ಧ ಕಾರ್ಯಾಚರಣೆ ನಡೆಸುವಲ್ಲಿ ವೈಫಲ್ಯ ಅನುಭವಿಸಿರುವ ಪಾಕಿಸ್ತಾನಕ್ಕೆ ಅಮೆರಿಕ 300 ಮಿಲಿಯನ್ ಆರ್ಥಿಕ ನೆರವು ನೀಡಲು  ನಿರಾಕರಿಸಿದೆ.

ಒಂದು ವೇಳೆ ಪಾಕಿಸ್ತಾನ ತನ್ನ ನಡವಳಿಕೆಯಲ್ಲಿ ಬದಲಾವಣೆ ಮಾಡಿದರೆ ಒಕ್ಕೂಟದ ಬೆಂಬಲ ನಿಧಿಯಿಂದ 300 ಮಿಲಿಯನ್ ಯುಎಸ್ ಡಾಲರ್ ನೆರವು ನೀಡುವ ವಿಚಾರವನ್ನು ಮತ್ತೊಮ್ಮೆ ಪರಿಶೀಲಿಸಲು ಸಾಧ್ಯ ಎಂದು ಅಮೆರಿಕದ ರಕ್ಷಣಾ ಖಾತೆ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ತಿಳಿಸಿದ್ದಾರೆ.

ಕಳೆದ 17 ವರ್ಷಗಳಿಂದ ಅಫ್ಫಾನಿಸ್ತಾನಕ್ಕೆ ತೊಂದರೆ ನೀಡುತ್ತಿರುವ  ಭಯೋತ್ಪಾದಕರಿಗೆ ಪಾಕಿಸ್ತಾನ  ಆಶ್ರಯ ಮತ್ತು ನೆರವು ನೀಡಿದ್ದು,  ಭಯೋತ್ಪಾದಕರಿಗೆ ನೀಡುವ ನೆರವನ್ನು ಸ್ಥಗಿತಗೊಳಿಸಿ ಅವರ ವಿರುದ್ಧ  ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅಮೆರಿಕ ಸರಕಾರವು  ಪಾಕಿಸ್ತಾನಕ್ಕೆ ಹಲವು ಬಾರಿ  ಮನವಿ ಮಾಡಿತ್ತು. ಆದರೆ ಪಾಕಿಸ್ತಾನ ಸರಕಾರ ಅಮೆರಿಕದ ಮನವಿಗೆ ಸ್ಪಂದಿಸದ ಕಾರಣಕ್ಕಾಗಿ ಅಮೆರಿಕ ಇದೀಗ ಹಲವು ವರ್ಷಗಳಿಂದ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಅಮೆರಿಕದಿಂದ ಪಾಕಿಸ್ತಾನ 2002ರಿಂದ ಈ ತನಕ 33 ಬಿಲಿಯನ್ ಯುಎಸ್ ಡಾಲರ್ ನೆರವು ಪಡೆದಿದೆ.

ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಧಾನ ಮಂತ್ರಿ ಇಮ್ರಾನ್ ಖಾನ್ ದೇಶವನ್ನು ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News