ಸಚಿನ್ ಮೀಗಾ, ಇತರರ ವಿರುದ್ಧದ ದೂರು ವಜಾ ಮಾಡಿ ಸರ್ಕಾರ ಆದೇಶ

Update: 2018-09-02 06:55 GMT

ಚಿಕಮಗಳೂರು, ಸೆ. 2: ಸಚಿನ್ ಮೀಗಾ ಹಾಗು ಇತರರ ಮೇಲೆ ಚಿಕುಮಗಳೂರಿನ ಜಿಲ್ಲಾಧಿಕಾರಿ ನಿರ್ದೇಶನದಂತೆ ದಾಖಲಾಗಿದ್ದ ದೂರನ್ನು ಸಂಪುಟ ಸಭೆಯಲ್ಲಿ ವಜಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 2016ರ ಅ. 9ರಂದು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರಧನ ವಿತರಿಸುವಲ್ಲಿ ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಿಸಾನ್ ಖೇತ್ ಮಜ್ದೂರು ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಚಿನ್ ಮೀಗಾರನ್ನು ಬಂಧಿಸುವಂತೆ ಜಿಲ್ಲಾಧಿಕಾರಿಯಾದ ಸತ್ಯವತಿ ಆದೇಶಿಸಿದ್ದರು. ತದನಂತರ ಮೀಗಾ ಅವರು 2 ತಿಂಗಳು ಜಿಲ್ಲಾಧಿಕಾರಿ ಕಚೇರಿಯ 100 ಮೀಟರ್ ಒಳಗೆ ಬರದಂತೆ ವ್ಯಕ್ತಿಗತವಾಗಿ 144 ಸೆಕ್ಷನ್ ಜರಿ ನೀಡಲಾಗಿತ್ತು. ಈ ಆದೇಶವು ಚಿಕ್ಕಮಗಳೂರು ಇತಿಹಾಸದಲ್ಲಿ ಸಿಪಿಐ ಹೋರಾಟಗಾರ ದಿ. ಬಿ.ಕೆ. ಸುಂದ್ರೇಶ್ ಅವರ ಮೇಲೆ ಹೇರಲಾಗಿತ್ತು. 

ಇದರ ವಿರುದ್ಧ ಹೋರಾಡಿದ ಸಚಿನ್ ಮೀಗಾ ಸಮರ್ಥವಾದ ದಾಖಲೆಗಳ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಿಸಿ, ಮೃತ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಿಸುವಲ್ಲಿ  ಯಶಶ್ವಿಯಾದರು ಹಾಗು ಸಚಿನ್ ಮೀಗಾ ಹಾಗು ಇತರರ ಮೇಲೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ನಿರ್ದೇಶನದಂತೆ ದಾಖಲಾಗಿದ್ದ ದೂರನ್ನು ಸಂಪುಟ ಸಭೆಯಲ್ಲಿ ವಜಾಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News