ಮಧ್ಯಪ್ರದೇಶ: ತೃತೀಯ ಲಿಂಗಿ ಮತದಾರರ ಸಂಖ್ಯೆ 300ಕ್ಕೆ ಏರಿಕೆ

Update: 2018-09-02 17:41 GMT

ಭೋಪಾಲ, ಸೆ. 2: ಕಳೆದ 2013ರ ಚುನಾವಣೆಗೆ ಹೋಲಿಸಿದರೆ ಮಧ್ಯಪ್ರದೇಶದ ಈ ಭಾರಿಯ ಚುನಾವಣೆಯಲ್ಲಿ ತೃತೀಯ ಲಿಂಗಿ ಮತದಾರರ ಸಂಖ್ಯೆ 300 ಏರಿಕೆಯಾಗಲಿದೆ. ಕಳೆದ ವರ್ಷ ವಿಧಾನ ಸಭೆ ಚುನಾವಣೆ ಸಂದರ್ಭ ರಾಜ್ಯದಲ್ಲಿ ನೋಂದಾಯಿಸಿದ ಒಟ್ಟು ಮತದಾರರು 4.94 ಕೋಟಿ. ಇದರಲ್ಲಿ 1,286 ಮತದಾರರು ತೃತೀಯ ಲಿಂಗಿಗಳು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ 970 ತೃತೀಯ ಲಿಂಗಿ ಗಳು ನೋಂದಣಿ ಮಾಡಿಕೊಂಡಿದ್ದರು.

ಈಗ ಮತದಾನ ನೋಂದಣಿ ಮಾಡಿಕೊಂಡ ತೃತೀಯ ಲಿಂಗಿಗಳ ಸಂಖ್ಯೆ 1,286 ಎಂದು ಮಧ್ಯಪ್ರದೇಶದ ಮುಖ್ಯ ಚುನಾವಣಾ ಆಯುಕ್ತ ವಿ.ಎಲ್. ಕಾಂತ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News