ಶಿವಮೊಗ್ಗ ಮನಪಾ ಬಿಜೆಪಿ ತೆಕ್ಕೆಗೆ , ಮೈಸೂರು, ತುಮಕೂರು ಅತಂತ್ರ

Update: 2018-09-03 06:11 GMT

ಬೆಂಗಳೂರು, ಸೆ.3:  ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣೆಕೆ ಭರದಿಂದ ಸಾಗಿದ್ದು,   ಶಿವಮೊಗ್ಗ ಮಹಾನಗರಪಾಲಿಕೆ ಬಿಜೆಪಿ ತೆಕ್ಕೆಗೆ ಜಾರಿದೆ. ಮೈಸೂರು, ತುಮಕೂರು  ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರವಾಗಿದೆ.

ರಾಜ್ಯದಲ್ಲಿ 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದಲೇ 22 ಜಿಲ್ಲೆಗಳ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ  ಆರಂಭಗೊಂಡಿದೆ. ಫಲಿತಾಂಶ ವಿವರ 

*ಮೈಸೂರು ಮನಪಾದಲ್ಲಿ 65ರಲ್ಲಿ 65 ಸ್ಥಾನಗಳ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 22, ಬಿಜೆಪಿ 18, ಜೆಡಿಎಸ್ 20, ಇತರ 5 

* ಶಿವಮೊಗ್ಗ ಮನಪಾದಲ್ಲಿ 35/35 : ಬಿಜೆಪಿ 20 , ಕಾಂಗ್ರೆಸ್ 7, ಜೆಡಿ ಎಸ್ 2,  ಇತರ 6 

*ತುಮಕೂರು ಮನಪಾ 35/35 :   ಕಾಂಗ್ರೆಸ್ 9 , ಬಿಜೆಪಿ 12, ಜೆಡಿಎಸ್ 11,  ಇತರ 3

*ಚಾಮರಾಜ ನಗರಸಭೆಯಲ್ಲಿ ಕಾಂಗ್ರೆಸ್ ಗೆ ಸೋಲು

*ರಾಯಚೂರು ನಗರಸಭೆಯಲ್ಲಿ  ಅತಂತ್ರ ಫಲಿತಾಂಶ ಬಂದಿದೆ

*ಮಾನ್ವಿ ಪುರಸಭೆ ಅತಂತ್ರ : ಒಟ್ಟು 27  ಸ್ಥಾನಗಳಲ್ಲಿ ಬಿಜೆಪಿ-0, ಕಾಂಗ್ರೆಸ್-13, ಜೆಡಿಎಸ್-8, ಇತರೆ ಪಕ್ಷಗಳು-6 

*ಚಿಕ್ಕೋಡಿ ಪುರಸಭೆ ಬಿಜೆಪಿ ಪಾಲಾಗಿದೆ.

*ಮಹಾಲಿಂಗಪುರ ಪುರಸಭೆ ಬಿಜೆಪಿ ಪಾಲಾಗಿದೆ.

*ಕುಂದಾಪುರ, ಉಡುಪಿಯಲ್ಲಿ ಬಿಜೆಪಿ  ಮೇಲುಗೈ

*ಬಾಗಲಕೋಟೆಯಲ್ಲಿ  ಬಿಜೆಪಿ ಮೇಲುಗೈ

*ಕೊಪ್ಪಳ, ರಾಣೆಬೆನ್ನೂರು, ಗಂಗಾವತಿ, ಚಾಮರಾಜ ನಗರ    ನಗರಸಭೆ ಅತಂತ್ರವಾಗಿದೆ. 

*ತೆರದಾಳ  ಪುರಸಭೆಯಲ್ಲಿ ಬಿಜೆಪಿ -ಕಾಂಗ್ರೆಸ್ ಸಮಬಲ ಸಾಧಿಸಿದೆ.

*ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯ.

*ಮಧುಗಿರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

*ಗುರುಮಠ್ಕಲ್ ಪುರಸಭೆ ಕಾಂಗ್ರೆಸ್

*ಹಳಿಯಾಲ ಪುರಸಭೆ ಕಾಂಗ್ರೆಸ್ ಪಾಲಾಗಿದೆ

*ಹಾವೇರಿ ನಗರಸಭೆ ಅತಂತ್ರವಾಗಿದೆ.

*ಮಂಡ್ಯದಲ್ಲಿ  ನಗರಸಭೆ  ಜೆಡಿಎಸ್ ಪಾಲಾಗಿದೆ.

*ಕಾರ್ಕಳ ಪುರಸಭೆಯಲ್ಲಿ ಫಲಿತಾಂಶ ಅತಂತ್ರವಾಗಿದೆ.

*ಬೈಲಹೊಂಗಲ ಪುರಸಭೆ ಕಾಂಗ್ರೆಸ್  ತೆಕ್ಕೆಗೆ 

*ಸವದತ್ತಿ ಎಲ್ಲಮ್ಮ  ಪುರಸಭೆ ಬಿಜೆಪಿ ತೆಕ್ಕೆಗೆ ಜಾರಿದೆ.

*ಹಟ್ಟಿ ಪಂ.ಪಂ ಕಾಂಗ್ರೆಸ್ ಪಾಲು, ಬಿಜೆಪಿ ಶೂನ್ಯ ಸಂಪಾದನೆ

*ಯಾದಗಿರಿ ನಗರಸಭೆ ಬಿಜೆಪಿ ಪಾಲಿಗೆ 

*ಹೈದರಾಬಾದ್  ಕರ್ನಾಟಕದಲ್ಲಿ   ಕಾಂಗ್ರೆಸ್  ಮೇಲುಗೈ

*ಕರಾವಳಿಯಲ್ಲಿ ಬಿಜೆಪಿ ಮೇಲುಗೈ

*ಶಿರಸಿ  ನಗರಸಭೆ ಬಿಜೆಪಿ ಪಾಲಾಗಿದೆ.

*ಶಿವಮೊಗ್ಗದಲ್ಲಿ 35ರಲ್ಲಿ 19 ಸ್ಥಾನಗಳು ಬಿಜೆಪಿ ಪಾಲಾಗಿದೆ.

*ಹೊಳೆ ನರಸಿಪುರ ಪುರಸಭೆ: ಜೆಡಿಎಸ್ ಕ್ಲೀನ್ ಸ್ವೀಪ್ 

*ಉಡುಪಿ ನಗರ ಸಭೆಯನ್ನು ಬಿಜೆಪಿ ವಶಕ್ಕೆ ತೆಗೆದುಕೊಂಡಿದೆ.

*ಗುಬ್ಬಿ, ಕೊರಟೆಗೆರೆ ಪಟ್ಟಣ ಪಂಚಾಯತು ಜೆಡಿಎಸ್ ಪಾಲಾಗಿದೆ. ಡಿಸಿಎಂ ಡಾ.ಪರಮೇಶ್ವರ್ ಗೆ ಹಿನ್ನಡೆ ಆಗಿದೆ.

*ಬಂಟ್ವಾಳ ಪುರಸಭೆ ಕಾಂಗ್ರೆಸ್ ಪಾಲಾಗಿದೆ.

*ಮುಧೋಳ  ನಗರಸಭೆ ಬಿಜೆಪಿ ತೆಕ್ಕಗೆ 

*ಬೈಲಹೊಂಗಲ ಪುರಸಭೆ ಕಾಂಗ್ರೆಸ್ ವಶಕ್ಕೆ

* ಬಾದಾಮಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News