ತುಮಕೂರು ಜಿಲ್ಲೆ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ

Update: 2018-09-03 17:07 GMT

ತುಮಕೂರು,ಸೆ.3: ಜಿಲ್ಲೆಯ ತಲಾ ಎರಡು ಪಟ್ಟಣ ಪಂಚಾಯತ್, ಪುರಸಭೆ ಹಾಗೂ ಒಂದು ನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಪುರಸಭೆ, ಕೊರಟಗೆರೆ ಮತ್ತು ಗುಬ್ಬಿ ಪಟ್ಟಣ ಪಂಚಾಯತ್ ನಲ್ಲಿ ಜೆಡಿಎಸ್ ಬಹುಮತ ಪಡೆದರೆ, ಕಾಂಗ್ರೆಸ್ ಮಧುಗಿರಿ ಪುರಸಭೆಯಲ್ಲಿ ಬಹುಮತ ಪಡದಿದೆ. ನಗರಪಾಲಿಕೆ ಅತಂತ್ರವಾಗಿದ್ದು, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.

ತುಮಕೂರು ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 10 ಹಾಗೂ 3 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಹುಮತಕ್ಕೆ ಅಗತ್ಯವಿರುವ 19 ಸ್ಥಾನಗಳನ್ನು ಯಾವ ಪಕ್ಷವೂ ಪಡೆದಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಕ್ಷೇತ್ರವಾದ ಕೊರಟಗೆರೆ ಪಟ್ಟಣ ಪಂಚಾಯತ್ ನಲ್ಲಿ ಜೆಡಿಎಸ್ 08, ಕಾಂಗ್ರೆಸ್ 05, ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 1 ಹಾಗೂ ಪಕ್ಷೇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ 07 ಸ್ಥಾನ ಪಡೆದಿದ್ದ ಕಾಂಗ್ರೆಸ್ ಪಕ್ಷೇತರರೊಂದಿಗೆ ಸೇರಿ ಅಧಿಕಾರ ಪಡೆದಿತ್ತು.

ಜೆಡಿಎಸ್ ಶಾಸಕರಿರುವ ಮಧುಗಿರಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಉಳಿದಂತೆ ಜೆಡಿಎಸ್ 09, ಪಕ್ಷೇತರರು 01 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಒಂದೂ ಸ್ಥಾನ ಗೆಲ್ಲದೆ ತೀವ್ರ ಮುಖಭಂಗ ಅನುಭವಿಸಿದೆ.

ಬಿಜೆಪಿ ಶಾಸಕರಿರುವ ಚಿಕ್ಕನಾಯಕನಹಳ್ಳಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ 14 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದರೆ, ಕಾಂಗ್ರೆಸ್ 02, ಪಕ್ಷೇತರ 02 ಮತ್ತು ಬಿಜೆಪಿ 05 ಸ್ಥಾನ ಪಡೆದಿದೆ. ನಗರದ ಜನತೆಗೆ ಬಿಜೆಪಿಗೆ ಮಣೆ ಹಾಕಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ ಅವರ ಕ್ಷೇತ್ರ ಗುಬ್ಬಿ ಪಟ್ಟಣ ಪಂಚಾಯತ್ ನಲ್ಲಿ ಜೆಡಿಎಸ್ 10 ಸ್ಥಾನ ಪಡೆದು ಅಧಿಕಾರ ಹಿಡಿಯುವ ಸಿದ್ದತೆಯಲ್ಲಿದೆ. ಬಿಜೆಪಿ 06 , ಕಾಂಗ್ರೆಸ್ 02 ಮತ್ತು ಪಕ್ಷೇತರರು 01 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಒಂದರಲ್ಲಿಯೂ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ.

ತುಮಕೂರು ನಗರಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಹೀಗಿದೆ.

ಗೆಲುವು ಸಾಧಿಸಿದ ಅಭ್ಯರ್ಥಿ ಮತ್ತು ಪಕ್ಷ-    ಸಮೀಪದ ಪ್ರತಿಸ್ಪರ್ಧಿ
1)ನಳಿನ ಇಂದ್ರಕುಮಾರ್, ಬಿಜೆಪಿ 1660           ಜಯಲಕ್ಷ್ಮಿ ಪಕ್ಷೇತರ 883
2)ಮಂಜುನಾಥ್, ಬಿಜೆಪಿ 1761                      ವೈ.ಹೆಚ್.ಹನುಮಂತರಾಯಪ್ಪ ಪಕ್ಷೇತರ 1074
3)ಲಕ್ಷ್ಮಿ ನರಸಿಂಹರಾಜು, ಜೆಡಿಎಸ್ 1134         ಎನ್.ಮಹೇಶ್ ಕಾಂಗ್ರೆಸ್ 1085
4)ದೀಪಶ್ರೀ ಮಹೇಶ್, ಬಿಜೆಪಿ 1508                ಟಿ.ಎಸ್.ಸಂಧ್ಯಾನಾರಾಯಣಪ್ಪ  ಕಾಂಗ್ರೆಸ್ 1379
5)ಟಿ.ಎಂ.ಮಹೇಶ್(ಮೆಸ್) ಕಾಂಗ್ರೆಸ್ 1013     ಟಿ.ಎಸ್.ಶೇಷಾಚಲಂ ಬಿಜೆಪಿ 842
6)ವೀಣಾ ಬಿ.ಜೆ., ಬಿಜೆಪಿ 2499                     ವಿಜಯಲಕ್ಷ್ಮೀ ಜೆಡಿಎಸ್ 1770
7)ಜೆ.ಕುಮಾರ್, ಕಾಂಗ್ರೆಸ್ 1695                  ಟಿ.ಆರ್.ನಾಗರಾಜು ಜೆಡಿಎಸ್ 1597
8)ಸೈಯದ್ ನಯಾಜ್, ಕಾಂಗ್ರೆಸ್ 2305          ಮಹಮದ್ ಖಾಲಿದ್ ಪಕ್ಷೇತರ 408
9)ಪ್ರಭಾವತಿ ಸುಧೀಶ್ವರ್, ಕಾಂಗ್ರೆಸ್ 2088       ಸೌಮ್ಯ ಶಿವಪ್ರಸಾದ್ ಜೆಡಿಎಸ್ 803
10)ನೂರುನ್ನಿಸಾ ಬಾನು, ಪಕ್ಷೇತರ 1961       ಮುಬಶ್ಶಿರ ಸುಲ್ತಾನ್ ಕಾಂಗ್ರೆಸ್ 1626
11)ಎಂ.ಕೆ.ಮನು, ಜೆಡಿಎಸ್ 1551                    ಎಂ.ಪಿ.ರಮೇಶ್ ಬಿಜೆಪಿ 1320
12)ಷಕಿಲ್ ಅಹಮದ್ ಷರೀಫ್, ಕಾಂಗ್ರೆಸ್ 1808     ಮುಕ್ತಾರ್ ಅಹಮದ್ ಪಕ್ಷೇತರ 1370
13)ಫರೀದ ಬೇಗಂ, ಕಾಂಗ್ರೆಸ್ 1098                  ಗೀತಾ ಟಿ. ಪಕ್ಷೇತರ 913
14)ನಾಸಿರಾ ಬಾನು, ಕಾಂಗ್ರೆಸ್ 2166                ರತ್ನಮಾಲ ಬಿಜೆಪಿ 1717
15)ಗಿರಿಜ .ವಿ.ಎಸ್., ಬಿಜೆಪಿ 1407                     ಡಿ.ಸಾವಿತ್ರಮ್ಮ ಕಾಂಗ್ರೆಸ್ 341
16)ಇನಾಯಿತುಲ್ಲಾ ಖಾನ್, ಕಾಂಗ್ರೆಸ್ 1582         ರಾಮಕೃಷ್ಣ ಜೆಡಿಎಸ್ 1054
17)ಬಿ.ಎಸ್.ಮಂಜುನಾಥ್, ಜೆಡಿಎಸ್ 1738         ಮೋಹನ್‍ಕುಮಾರ್ ಬಿಜೆಪಿ 933
18)ಮುಜೀದಾ ಖಾನಂ, ಕಾಂಗ್ರೆಸ್ 1621             ಗೀತಾ ರುದ್ರೇಶ್ ಪಕ್ಷೇತರ 1158
19)ರೂಪಶ್ರೀ ಬಿ.ಎಸ್., ಕಾಂಗ್ರೆಸ್ 1448             ಲಲಿತಾಕುಮಾರಿ ಜೆಡಿಎಸ್ 840
20)ಎ.ಶ್ರೀನಿವಾಸ, ಜೆಡಿಎಸ್   3488                 ರವಿಶಂಕರ್ ಟಿ.ವಿ. ಬಿಜೆಪಿ 753
21)ಲಲಿತಾ ರವೀಶ್, ಜೆಡಿಎಸ್ 2134                 ಭಾಗ್ಯ ರಾಜೇಂದ್ರ ಬಿಜೆಪಿ 1023
22)ಹೆಚ್.ರವಿಕುಮಾರ್, ಜೆಡಿಎಸ್ 1748             ಸಂದೀಪ್ ಗೌಡ ಬಿಜೆಪಿ 852
23)ಟಿ.ಕೆ.ನರಸಿಂಹಮೂರ್ತಿ, ಜೆಡಿಎಸ್ 2147       ಟಿ.ಎನ್.ಶ್ರೀನಿವಾಸಮೂರ್ತಿ ಬಿಜೆಪಿ 2078
24)ಶಿವರಾಮು, ಪಕ್ಷೇತರ 1183,                      ಶಿವಕುಮಾರ್ ಎಸ್.ಪಕ್ಷೇತರ 959
25)ಮಂಜುಳ ಕೆ.ಎಸ್.ಆದರ್ಶ, ಬಿಜೆಪಿ 2313         ಪಿಬಿ.ವಿಜಯರುದ್ರೇಶ್ ಕಾಂಗ್ರೆಸ್ 946
26)ಹೆಚ್.ಮಲ್ಲಿಕಾರ್ಜುನಯ್ಯ, ಬಿಜೆಪಿ 1532           ಪ್ರಸನ್ನಕುಮಾರ್ ಪಕ್ಷೇತರ 563
27) ಚಂದ್ರಕಲಾ, ಬಿಜೆಪಿ 1339                         ಎ.ಹೆಚ್.ಜಯಲಕ್ಷ್ಮಿ ಜೆಡಿಎಸ್ 1213
28)ಧರಣೇಂದ್ರಕುಮಾರ್, ಜೆಡಿಎಸ್ 1040            ರವಿಕುಮಾರ್ ಎಂ.ಎಲ್.ಬಿಜೆಪಿ 781
29)ನಜೀಮಾ ಬೀ, ಜೆಡಿಎಸ್ 3474                  ಉಮ್ಮು ಸಲ್ಮಾ  ಕಾಂಗ್ರೆಸ್ 1237 
30)ವಿಷ್ಣು ವರ್ಧನ, ಸ್ವತಂತ್ರ  1841                    ಎಂ.ವೈ.ರುದ್ರೇಶ್ ಬಿಜೆಪಿ 1202
31)ಸಿ.ಎಸ್.ರಮೇಶ್, ಬಿಜೆಪಿ 2471                     ಚೇತನ ಪುಟ್ಟೀರಪ್ಪ ಜೆಡಿಎಸ್  2129
32)ಬಿ.ಜಿ.ಕೃಷ್ಣಪ್ಪ, ಬಿಜೆಪಿ 2268                          ಲಕ್ಷ್ಮಿ ನಾರಾಯಣ ಜೆಡಿಎಸ್ 2035
33)ಶಶಿಕಲ ಗಂಗಹನುಮಯ್ಯ, ಜೆಡಿಎಸ್ 1451        ಧನಲಕ್ಷ್ಮಿ ರವಿ ಕಾಂಗ್ರೆಸ್ 1292
34)ನವೀನ ಅರುಣ ಎಂ.ಸಿ. 1077                        ಮಂಗಳ ಅಶೋಕ್ ಪಕ್ಷೇತರ 721
35)ಹೆಚ್.ಎಸ್.ನಿರ್ಮಲ್ ಶಿವಕುಮಾರ್, ಬಿಜೆಪಿ 2051  ಸಿದ್ದೇಶ್ವರಿ ಜೆಡಿಎಸ್ 1900 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News