ಚಾಮರಾಜ ನಗರಸಭೆ: 'ಸೋಲಿಲ್ಲದ ಸರದಾರ'ನನ್ನು ಸೋಲಿಸಿದ ಎಸ್‌ಡಿಪಿಐ ಅಭ್ಯರ್ಥಿ

Update: 2018-09-03 07:17 GMT

ಚಾಮರಾಜನಗರ, ಸೆ.3: ಚಾಮರಾಜನಗರ ನಗರಸಭೆ ನಡೆದ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಅಧಿಕಾರದ ಗದ್ದುಗೆಯೇರುವತ್ತ ಚಿತ್ತ ಹರಿಸಿದೆ. ಆದರೆ ಇಲ್ಲಿ ಎಸ್‌ಡಿಪಿಐ ಗಮನಾರ್ಹ ಸಾಧನೆ ಮೆರೆದಿದ್ದು, ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಅಚ್ಚರಿಯ ಫಲಿತಾಂಶ

9ನೇ ವಾರ್ಡ್‌ನಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಮಹೇಶ್ ಅವರ ಗೆಲುವು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಈ ವಾರ್ಡ್‌ನಲ್ಲಿ 9 ಬಾರಿ ಗೆದ್ದು ಸೋಲಿಲ್ಲದ ಸರದಾರನೆನಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಸ್.ನಂಜುಂಡಸ್ವಾಮಿ ಸೋಲುಂಡಿದ್ದಾರೆ.

ಎಸ್.ನಂಜುಂಡಸ್ವಾಮಿ ಈ ಹಿಂದೆ ಒಂಬತ್ತು ಬಾರಿ ಗೆದ್ದಿದ್ದಲ್ಲದೆ ನಗರಸಭೆಯ ಅಧ್ಯಕ್ಷರೂ ಆಗಿದ್ದರು. ಅವರಿಗೆ ಸೋಲುಣಿಸುವ ಮೂಲಕ ಎಸ್‌ಡಿಪಿಐ ಅಭ್ಯರ್ಥಿ ಮಹೇಶ್ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದಾರೆ.

ಒಟ್ಟು 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 7, ಎಸ್‌ಡಿಪಿಐ 6, ಪಕ್ಷೇತರ 2 ಹಾಗೂ ಬಿಎಸ್ಪಿ 1 ಸ್ಥಾನದಲ್ಲಿ ಜಯಭೇರಿ ಬಾರಿಸಿದೆ.

# ವಾರ್ಡ್ ವಾರು ಅಭ್ಯರ್ಥಿಗಳ ವಿವರ ಹಾಗೂ ಪಕ್ಷ

1ನೇ ವಾರ್ಡ್ - ನೀಲಮ್ಮ - ಕಾಂಗ್ರೆಸ್

2ನೇ ವಾರ್ಡ್ - ಗೌರಿ -ಬಿಜೆಪಿ

3ನೇ ವಾರ್ಡ್ - ಮುಹಮ್ಮದ್ ಅಮೀಕ್ - ಎಸ್‌ಡಿಪಿಐ

4ನೇ ವಾರ್ಡ್‌- ಖಲೀಲುಲ್ಲಾ - ಎಸ್‌ಡಿಪಿಐ

5ನೇ ವಾರ್ಡ್- ತೌಸಿಯಾ ಬಾನು - ಎಸ್‌ಡಿಪಿಐ

6ನೇ ವಾರ್ಡ್- ಸಮೀಉಲ್ಲಾ ಖಾನ್ - ಎಸ್‌ಡಿಪಿಐ

7ನೇ ವಾರ್ಡ್ - ಆಶಾ - ಬಿಜೆಪಿ

8ನೇ ವಾರ್ಡ್ - ರಾಘವೇಂದ್ರ - ಬಿಜೆಪಿ

9ನೇ ವಾರ್ಡ್- ಮಹೇಶ್ - ಎಸ್‌ಡಿಪಿಐ
10 ನೇ ವಾರ್ಡ್- ಮನೋಜ್ ಪಟೇಲ್ - ಬಿಜೆಪಿ

11ನೇ ವಾರ್ಡ್ - ಮಂಜುನಾಥ್ - ಬಿಜೆಪಿ

12-ನೇ ವಾರ್ಡ್ ಸೈಯದ್ ಅಬ್ರಾರ್ - ಎಸ್‌ಡಿಪಿಐ

13ನೇ ವಾರ್ಡ್- ಕಲಾವತಿ - ಕಾಂಗ್ರೆಸ್

14ನೇ ವಾರ್ಡ್- ಚಿನ್ನಮ್ಮ - ಕಾಂಗ್ರೆಸ್

15ನೇ ವಾರ್ಡ್- ಜಗದೀಶ್ - ಪಕ್ಷೇತರ

16ನೇ ವಾರ್ಡ್-ಚಂದ್ರಕಲಾ - ಕಾಂಗ್ರೆಸ್

17ನೇ ವಾರ್ಡ್ - ಬಸವಣ್ಣ - ಪಕ್ಷೇತರ

18ನೇ ವಾರ್ಡ್ - ಶಾಂತಿ - ಕಾಂಗ್ರೆಸ್

19ನೇ ವಾರ್ಡ್ - ಶಿವರಾಜ್ - ಬಿಜೆಪಿ

20ನೇ ವಾರ್ಡ್- ಚಂದ್ರಶೇಖರ್ - ಬಿಜೆಪಿ

21ನೇ ವಾರ್ಡ್- ಸುದರ್ಶನ ಗೌಡ- ಬಿಜೆಪಿ

22ನೇ ವಾರ್ಡ್- ಮಮತಾ - ಬಿಜೆಪಿ

23ನೇ ವಾರ್ಡ್- ಗಾಯತ್ರಿ - ಬಿಜೆಪಿ

24ನೇ ವಾರ್ಡ್ - ಭಾಗ್ಯಮ್ಮ- ಕಾಂಗ್ರೆಸ್

25ನೇ ವಾರ್ಡ್- ಲೋಕೇಶ್ವರಿ- ಬಿಜೆಪಿ

26ನೇ ವಾರ್ಡ್- ಕುಮುದಾ - ಬಿಜೆಪಿ

27ನೇ ವಾರ್ಡ್- ಪ್ರಕಾಶ್ -ಬಿಎಸ್ಪಿ

28ನೇ ವಾರ್ಡ್- ಸುರೇಶ್ - ಬಿಜೆಪಿ

29ನೇ ವಾರ್ಡ್- ಸುಧಾ- ಬಿಜೆಪಿ

30ನೇ ವಾರ್ಡ್- ಮಹದೇವಯ್ಯ- ಬಿಜೆಪಿ

31ನೇ ವಾರ್ಡ್- ರಾಜಪ್ಪ - ಕಾಂಗ್ರೆಸ್


ಪಕ್ಷವಾರು ವಿವರ

ಬಿಜೆಪಿ - 15
ಕಾಂಗ್ರೆಸ್ - 07
ಪಕ್ಷೇತರ - 02
ಎಸ್‌ಡಿಪಿಐ - 06
ಬಿಎಸ್ಪಿ - 01

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News