ರಸ್ತೆ ಅಪಘಾತ: ಮೀನು ಮಾರಾಟ ಮಾಡಿ ಗಮನಸೆಳೆದಿದ್ದ ಹನನ್ ಗೆ ಗಂಭೀರ ಗಾಯ

Update: 2018-09-03 08:59 GMT

ಕೊಡುಂಗಲ್ಲೂರ್, ಸೆ.3: ಕಾಲೇಜು ಸಮವಸ್ತ್ರದಲ್ಲಿ ಮೀನು ಮಾರಾಟ ಮಾಡಿ ಗಮನಸೆಳೆದಿದ್ದ ವಿದ್ಯಾರ್ಥಿನಿ ಹನನ್ ಹಮೀದ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

ಕಾರು ವಿದ್ಯುತ್‌ ಕಂಬವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಹನನ್ ರ ಬೆನ್ನುಹುರಿಗೆ ಹಾನಿಯಾಗಿದೆ. ಅಫಘಾತದಲ್ಲಿ ಕಾರು ಚಾಲಕನೂ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಕೊಡುಂಗಲ್ಲೂರ್‌ನಲ್ಲಿ ಒಂದು ಸ್ಟೇಜ್ ಶೋ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಢಿಕ್ಕಿಯಾಗುವುದನ್ನು ತಪ್ಪಿಸಿದಾಗ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಹನನ್‌ಳನ್ನು ಕೂಡಲೇ ಕೊಡುಂಗಲ್ಲೂರ್ ಖಾಸಗಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News