ಸ್ಥಳೀಯ ಸಂಸ್ಥೆ ಚುನಾವಣೆ: ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ

Update: 2018-09-03 09:14 GMT

ರಾಯಚೂರು, ಸೆ.3: ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಒಟ್ಟು 7 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 4ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುತ ಗಳಿಸಿದ್ದರೆ, 3ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಎಲ್ಲೂ ಅಧಿಕಾರಕ್ಕೇರದೆ ಮುಖಭಂಗಕ್ಕೀಡಾಗಿದೆ.

ಒಟ್ಟು 175 ವಾರ್ಡ್‌ಗಳಲ್ಲಿ ಕಾಂಗ್ರೆಸ್ 92, ಬಿಜೆಪಿ 22, ಜೆಡಿಎಸ್ 40 ಹಾಗೂ ಪಕ್ಷೇತರರು 21 ಮಂದಿ ಗೆಲುವಿನ ಸವಿಯುಂಡಿದ್ದಾರೆ.

# ಫಲಿತಾಂಶದ ಸಂಕ್ಷಿಪ್ತ ವಿವರ ಈ ಕೆಳಗಿನಂತಿವೆ

ರಾಯಚೂರು ನಗರಸಭೆ(35 ವಾರ್ಡ್)
ಕಾಂಗ್ರೆಸ್ 13
ಬಿಜೆಪಿ 11
ಪಕ್ಷೇತರ 8
ಜೆಡಿಎಸ್ 3
ಫಲಿತಾಂಶ: ಅತಂತ್ರ (ಮ್ಯಾಜಿಕ್ ನಂ.18)


ಸಿಂಧನೂರು ನಗರಸಭೆ(31ವಾರ್ಡ್)
ಕಾಂಗ್ರೆಸ್ 20
ಜೆಡಿಎಸ್ 11
ಬಿಜೆಪಿ 00
ಫಲಿತಾಂಶ: ಕಾಂಗ್ರೆಸ್ ಅಧಿಕಾರಕ್ಕೆ


ದೇವದುರ್ಗ ಪುರಸಭೆ(23 ವಾರ್ಡ್)
ಕಾಂಗ್ರೆಸ್ 11
ಬಿಜೆಪಿ 8
ಜೆಡಿಎಸ್ 3
ಪಕ್ಷೇತರ 1
ಫಲಿತಾಂಶ: ಅತಂತ್ರ (ಮ್ಯಾಜಿಕ್ ನಂ.12)


ಲಿಂಗಸುಗೂರು ಪುರಸಭೆ(23 ವಾರ್ಡ್)

ಕಾಂಗ್ರೆಸ್ 13 ಜೆಡಿಎಸ್ 4
ಪಕ್ಷೇತರ  4
ಬಿಜೆಪಿ 2
ಕಾಂಗ್ರೆಸ್ ಅಧಿಕಾರಕ್ಕೆ


ಮಾನ್ವಿ ಪುರಸಭೆ(27 ವಾರ್ಡ್)
ಕಾಂಗ್ರೆಸ್ 13
ಜೆಡಿಎಸ್ 8
ಎಸ್ಪಿ 4
ಪಕ್ಷೇತರ 1
ಡಬ್ಲುಪಿಎಲ್ 1
ಬಿಜೆಪಿ 0
ಫಲಿತಾಂಶ: ಅತಂತ್ರ (ಮ್ಯಾಜಿಕ್ ನಂ.14)


ಮುದಗಲ್ ಪುರಸಭೆ(23 ವಾರ್ಡ್)
ಕಾಂಗ್ರೆಸ್ 15
ಜೆಡಿಎಸ್ 7
ಬಿಜೆಪಿ 1
ಫಲಿತಾಂಶ: ಕಾಂಗ್ರೆಸ್ ಅಧಿಕಾರಕ್ಕೆ


ಹಟ್ಟಿ ಪಟ್ಟಣ ಪಂಚಾಯತ್(13 ವಾರ್ಡ್)

ಕಾಂಗ್ರೆಸ್ 8 ಜೆಡಿಎಸ್ 3
ಬಿಜೆಪಿ 00
ಐಎನ್‌ಡಿ 2
 ಫಲಿತಾಂಶ: ಕಾಂಗ್ರೆಸ್ ಅಧಿಕಾರಕ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News