ರೊಹಿಂಗ್ಯಾ ಬಿಕ್ಕಟ್ಟಿನ ಬಗ್ಗೆ ತಪ್ಪು ಚಿತ್ರ ಬಳಕೆ: ಕ್ಷಮೆ ಕೋರಿದ ಮ್ಯಾನ್ಮಾರ್ ಸೇನೆ

Update: 2018-09-04 10:20 GMT

ಯಾಂಗೊನ್, ಸೆ.4: ವಿರಳವೆನ್ನಬಹುದಾದ ಕ್ಷಮಾಪಣೆಯನ್ನು ಮ್ಯಾನ್ಮಾರ್ ಮಿಲಿಟರಿ ಸೋಮವಾರ ಸಲ್ಲಿಸಿದ್ದು,  ರೋಹಿಂಗ್ಯ ಮುಸ್ಲಿಂ ಅಲ್ಪಸಂಖ್ಯಾತರ ಬಿಕ್ಕಟ್ಟಿನ ಕುರಿತಂತೆ ಪ್ರಕಟವಾದ ಪುಸ್ತಕವೊಂದರಲ್ಲಿನ ಎರಡು ಫೋಟೋಗಳು ತಪ್ಪಾಗಿ ಅಚ್ಚಾಗಿವೆ ಎಂದು ಒಪ್ಪಿಕೊಂಡಿದೆ.

ಪುಲಿಟ್ಝರ್ ಪ್ರೈಝ್ ವೆಬ್‍ಸೈಟ್ ನಿಂದ ತೆಗೆಯಲಾದ ರುವಾಂಡದಲ್ಲಿನ ಹಿಂಸಾಚಾರದ ನಂತರ  ಅಲ್ಲಿನ ಹುಟು ನಿರಾಶ್ರಿತರು 1996ರಲ್ಲಿ ವಲಸೆ ಹೋಗುತ್ತಿರುವ ಸಂದರ್ಭದ ಚಿತ್ರವು ಮ್ಯಾನ್ಮಾರ್ ಸೇನೆಯು ಇತ್ತೀಚೆಗೆ ರೋಹಿಂಗ್ಯನ್ನರ ಬಗ್ಗೆ ಪ್ರಕಟಿಸಿದ ಪುಸ್ತಕದಲ್ಲಿ ಕಾಣಿಸುತ್ತದೆ. ಆದರೆ ಇಲ್ಲಿ ವರ್ಣಚಿತ್ರದ ಬದಲು ಕಪ್ಪು ಬಿಳುಪು ಚಿತ್ರ ಪ್ರಕಟಿಸಲಾಗಿದ್ದು ವಿವರಣೆಯಲ್ಲಿ ಮ್ಯಾನ್ಮಾರ್ ನ ಕೆಲ ಭಾಗದಲ್ಲಿ ಬ್ರಿಟಿಷ್ ವಸಾಹತುಶಾಹಿಗಳು ಆಕ್ರಮಿಸಿದ ನಂತರ ಬಂಗಾಳಿಗಳು ದೇಶ ಪ್ರವೇಶಿಸುತ್ತಿರುವುದು ಎಂದು ಹೇಳಲಾಗಿದೆ.

‘ರಾಯ್ಟರ್ಸ್’ ಸುದ್ದಿ ಸಂಸ್ಥೆ ಶುಕ್ರವಾರ ವಿಶೇಷ ವರದಿಯೊಂದನ್ನು ಪ್ರಕಟಿಸಿ ಮ್ಯಾನ್ಮಾರ್ ಮಿಲಿಟರಿ ಪ್ರಕಟಿತ ಪುಸ್ತಕದಲ್ಲಿನ ಎರಡು ಚಿತ್ರಗಳು ಬೇರೆ ಬೇರೆ ಕಡೆ ನಡೆದ ಸಂಘರ್ಷದ  ಚಿತ್ರಗಳಾಗಿವೆಯಾದರೂ ಕಳೆದ ವರ್ಷದ ರಾಖೈನ್ ರಾಜ್ಯದಲ್ಲಿನ ಘಟನೆಗಳನ್ನು ತೋರಿಸುತ್ತಿವೆ ಎಂದು ಅಲ್ಲಿನ ಸೇನೆ ಹೇಳಿಕೊಂಡಿದೆ ಹಾಗೂ ಇನ್ನೊಂದು ಚಿತ್ರಕ್ಕೆ ತಪ್ಪು ವಿವರಣೆ ನೀಡಲಾಗಿದೆ ಎಂದು ತಿಳಿಸಿದೆ.

ಈ ಪುಸ್ತಕದಲ್ಲಿನ ಫೋಟೋಗಳು ಬಾಂಗ್ಲಾದೇಶ ಮತ್ತು ತಾನ್ಝಾನಿಯಾದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ್ದಾಗಿದ್ದು, ಮೂರನೇ ಚಿತ್ರದಲ್ಲಿ ರೋಹಿಂಗ್ಯನ್ನರು ಮ್ಯಾನ್ಮಾರ್ ದೇಶವನ್ನು ಬಾಂಗ್ಲಾದೇಶದ ಮೂಲಕ ಪ್ರವೇಶಿಸುತ್ತಿದ್ದಾರೆ ಎಂದು ಬಣ್ಣಿಸಲಾಗಿದೆಯಾದರೂ ವಾಸ್ತವವಾಗಿ ಮ್ಯಾನ್ಮಾರ್ ತೊರೆಯುತ್ತಿರುವ ನಿರಾಶ್ರಿತರ ಚಿತ್ರ ಅದಾಗಿದೆ.

ತಮ್ಮ ತಪ್ಪಿಗೆ ಓದುಗರಿಂದ ಹಾಗೂ ಮೂಲ ಫೋಟೋಗಳ ಮಾಲಕರಿಂದ ಮ್ಯಾನ್ಮಾರ್ ಮಿಲಿಟರಿ ಕ್ಷಮೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News