ಹನೂರು: ಹಾಲು ಉತ್ಪಾದಕರ ಸಹಕಾರ ಸಂಘದ ಸಭೆ

Update: 2018-09-04 17:36 GMT

ಹನೂರು,ಸೆ.4: ಹೂಗ್ಯಂ ಗ್ರಾಪಂ ವ್ಯಾಪ್ತಿಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರಿಲ್ಲದಿರುವುದರಿಂದ ಈ ಭಾಗದ ಜಾನುವಾರಗಳಜೀವಕ್ಕೆ ರಕ್ಷಣೆ ಇಲ್ಲದಂತಾಗಿದ್ದು, ಈ ಬಗ್ಗೆ ಕೂಡಲೇ ಸರ್ಕಾರದ ಗಮನಕ್ಕೆ ತಂದು ವೈದ್ಯರನ್ನು ನೇಮಿಸುವಂತೆ ಹೂಗ್ಯಂ, ಜಲ್ಲಿಪಾಳ್ಯ, ಕೂಡ್ಲೂರು, ಪೆದ್ದನಪಾಳ್ಯ, ಸೇರಿದಂತೆ ಇನ್ನಿತರ ಗ್ರಾಮಗಳ ಜಾನುವಾರುಗಳ ಪಾಲಕರು ಚಾಮುಲ್ ಅಧ್ಯಕ್ಷ  ಸಿ.ಎಸ್ ಗುರುಮಲ್ಲಪ್ಪರವರಿಗೆ ಮೌಖಿಕವಾಗಿ ಮನವಿ ಸಲ್ಲಿಸಿದರು.

ಕ್ಷೇತ್ರ ವ್ಯಾಪ್ತಿಯ ಹೂಗ್ಯಂ, ಜಲ್ಲಿಪಾಳ್ಯ, ಕೂಡ್ಲೂರು, ಪೆದ್ದನಪಾಳ್ಯದ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಯನ್ನು ಆಯೋಜಿಸಿಲಾಗಿತ್ತು. ಈ ಸಭೆಯ ಪ್ರಾರಂಭದಲ್ಲಿ ವಿಸ್ತಾರಣಾಧಿಕಾರಿ ವೆಂಕಟೇಶ್ ಪ್ರತಿಯೊಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಈ ವರ್ಷದ ಲೆಕ್ಕ ಶೀರ್ಷಿಕೆ , ನಿವ್ವಳ ಲಾಭ ಮತ್ತು ಬಜೆಟ್‍ನ್ನು ಮಂಡಿಸಿದರು. 

ನಂತರ ಚಾಮುಲ್ ಅಧ್ಯಕ್ಷ ಮಾತನಾಡಿ, ಕ್ಷೇತ್ರದ ಗಡಿಭಾಗದಲ್ಲಿರುವ ರೈತರು ವೈದ್ಯರಿಲ್ಲದೆ ತಮ್ಮ ಜಾನುವಾರುಗಳಿಗೆ ರೋಗಗಳು ಬಂದಾಗ ಅದರ  ರಕ್ಷಣೆಗೆ ರೈತರು ಪರಿತಪಿಸುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತಂದು ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಇಲ್ಲಿನ ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದರೂಂದಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ನಂತರ ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಮಾತನಾಡಿ, ಪ್ರತಿ ಗ್ರಾಮ ಹಾಗೂ ಪಟ್ಟಣಗಳಲ್ಲಿ ಸಹಕಾರ ಸಂಘಗಳು ಬಲವರ್ದನೆಗೂಂಡರೆ ದೇಶದ ಆರ್ಥಿಕ ಪ್ರಗತಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹಲವಾರು ಸೌಲಭ್ಯಗಳನ್ನು ರೂಪಿಸಿದ್ದು, ಇದರ ಪ್ರಯೋಜನವನ್ನು ಪ್ರತಿ ಸದಸ್ಯರು ಪಡೆಯುವಂತಾಗಬೇಕು ಎಂದರು.

ಈ ಸಂದರ್ಭ ಚಾಮುಲ್ ನಿರ್ದೇಶಕ ಎಂ ನಂಜುಂಡಸ್ವಾಮಿ, ಉಪವ್ಯವಸ್ಥಾಪಕ ಸಿ.ಶರತ್, ವಿಸ್ತಾರಣಾಧಿಕಾರಿ ವೆಂಕಟೇಶ್, ಮೇಲ್ಕಂಡ ಗ್ರಾಮದ ಸಂಘಗಳ ಅಧ್ಯಕ್ಷರುಗಳಾದ ಎನ್ ಮಾದಶೆಟ್ಟಿ, ಗೋವಿಂದ, ಸೇಲ್ವಾಸೇಗಾಯಿಮೇರಿ, ಕೆ.ಶಿವ ಸೇರಿದಂತೆ ಕಾರ್ಯದರ್ಶಿಗಳಾದ ಜಿ.ಕೃಷ್ಣಪ್ಪ, ಲೀಲಾಜೋಷ್ಮೀನ್, ವಿರೇಸ್, ಮಾದರಾಜು, ಮಾದೇಶ್ ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News