ಆ್ಯಂಬುಲೆನ್ಸ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ: ರೋಗಿ ಮೃತ್ಯು

Update: 2018-09-06 09:13 GMT

ಆಲಪ್ಪುಳ, ಸೆ.6: ಆ್ಯಂಬುಲೆನ್ಸ್ ನಲ್ಲಿದ್ದ ಆಕ್ಸಿಜನ್ ಸಿಲಿಂಡರೊಂದು ಸ್ಫೋಟಗೊಂಡ ಪರಿಣಾಮ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ.

ಚಂಪಕುಲಂನ ಸರಕಾರಿ ಆಸ್ಪತ್ರೆಯ ಮುಂಭಾಗ ಆ್ಯಂಬುಲೆನ್ಸ್ ಬೆಂಕಿಗಾಹುತಿಯಾಗಿದೆ. ರೋಗಿಯನ್ನು ಆಲಪ್ಪುಳ ಮೆಡಿಕಲ್ ಕಾಲೇಜಿನಿಂದ ಚಂಪಕುಲಂಗೆ ಕರೆದೊಯ್ಯಲಾಗುತ್ತಿತ್ತು. ಘಟನೆಯಲ್ಲಿ ಚಾಲಕ ಮತ್ತು ನರ್ಸ್ ಗೆ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News