ಪುತ್ತಿಗೆಯ ‘ಮುನೀರ್ ಭಾಯ್’ ನಿಧನ

Update: 2018-09-07 04:16 GMT

ಮೂಡುಬಿದಿರೆ, ಸೆ.7: ಇಲ್ಲಿನ ಪುತ್ತಿಗೆ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ‘ಮುನೀರ್ ಭಾಯ್’ ಎಂದೇ ಚಿರಪರಿಚಿತರಾಗಿದ್ದ ಉದ್ಯಮಿ ಹಾಗೂ ಸಾಮಾಜಿಕ, ರಾಜಕೀಯ ಮುಂದಾಳು ಶೇಖ್ ಮುನೀರ್ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶುಕ್ರವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಪುತ್ತಿಗೆ ಗ್ರಾಮದಲ್ಲಿ ದಿನಸಿ ಅಂಗಡಿಯೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿದ್ದ ಮುನೀರ್, ಪುತ್ತಿಗೆ ಗ್ರಾಪಂ ಸದಸ್ಯರಾಗಿ, ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪುತ್ತಿಗೆಯ ಸರ್ವಧರ್ಮಗಳ ಜನರ ಅಪಾರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದ ಮುನೀರ್ ಅವರು, ಬಡವರ ಕಷ್ಟಗಳಿಗೆ ಸದಾ ಸ್ಪಂದಿಸುವ ಗುಣ ಹೊಂದಿದ್ದವರು. ಅಕ್ಕಿ ಖರೀದಿಸಲು ಹಣವಿಲ್ಲದೆ ತನ್ನ ಅಂಗಡಿಗೆ ಬಂದವರಿಗೆ ಉಚಿತವಾಗಿಯೇ ಊಟಕ್ಕೆ ಸಾಕಾಗುವಷ್ಟು ಅಕ್ಕಿ ಕೊಟ್ಟು ಕಳುಹಿಸುತ್ತಿದ್ದ ಅವರ ಹೃದಯ ವೈಶಾಲ್ಯವನ್ನು ಇಲ್ಲಿನ ಜನರು ನೆನಪಿಸಿಕೊಳ್ಳುತ್ತಾರೆ.

ಜಾತ್ಯತೀತ ಜನತಾ ದಳದಲ್ಲಿ ಸಕ್ರಿಯರಾಗಿದ್ದ ಮುನೀರ್ ಅವರು ಬಳಿಕ ಸಿವಿಲ್ ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದರು. ಸ್ಥಳೀಯ ನೂರಾನಿ ಮಸೀದಿಯ ಪದಾಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ